ಯುವಕರಿಂದ ರಾಷ್ಟ್ರ ನಿರ್ಮಾಣ ಸಾಧ್ಯ

5
Published on

ಮೈಸೂರು: ಯುವಕರು ಎಂದರೆ ಅಸಾಧ್ಯವಾದದ್ದನ್ನು ಸಾಧಿಸುವ ಛಲವುಳ್ಳವರು. ಅಂತಹ ಯುವಕರಿಂದ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು ಎಂದು ವಾಗ್ಮಿ, ಲೇಖಕ ಹಾಗೂ ಚಿಂತಕ ನಿತ್ಯಾನಂದ ವಿಕೇಕವಂಶಿ ತಿಳಿಸಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಐಕ್ಯೂಎಸಿ ಹಾಗೂ ಎನ್‌ಎಸ್‌ಎಸ್ ಘಟಕವು ಇತ್ತೀಚೆಗೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಧರ್ಮ ಮತ್ತು ಆಧ್ಯಾತ್ಮವನ್ನು, ವಿಶ್ವ ಬ್ರಾತೃತ್ವವನ್ನು, ಜಗತ್ತಿನ ಅತ್ಯಂತ ಪ್ರಾಚೀನ ಭಾರತವನ್ನು, ಜಗತ್ತಿನ ಹಲವು ದೇಶವಂಚಿತ ಧರ್ಮಗಳಿಗೆ ಆಶ್ರಯ ನೀಡಿದ ಭಾರತವನ್ನು ಪರಿಚಯಿಸಿದರು ಎಂದರು.

ಆ ಸಮ್ಮೇಳನದಲ್ಲಿ ಭಾರತದ ಆದ್ಯಾತ್ಮಿಕ ಆತ್ಮವೇ ವಿವೇಕಾನಂದರ ರೂಪದಲ್ಲಿ ಮಾತನಾಡಿದಂತಿತ್ತು. ಮಾರನೆಯ ದಿನ ಅಮೇರಿಕಾದ ಮಾಧ್ಯಮಗಳು ಸ್ವಾಮಿ ವಿವೇಕಾನಂದರನ್ನು ಸೈಕ್ಲೋನಿಕ್ ಮಾಂಕ್ ಆಫ್ ಇಂಡಿಯ ಎಂದು ಬಣ್ಣಿಸಿದುವು. ಚಿಕಾಗೋ ಸಮ್ಮೇಳನದಲ್ಲಿ ಮಾತನಾಡಿದ್ದರಿಂದಾಗಿ ಆ ದಿನವನ್ನು ಯೂನಿವರ್ಸಲ್ ಬ್ರದರ್ ಹುಡ್ ಡೇ ಆಗಿ ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಾಲೇಜಿನ ನಿರ್ದೇಶಕ ಪ್ರೊ.ಕೆ.ಬಿ. ವಾಸುದೇವ, ಪ್ರಾಂಶುಪಾಲ ಡಾ.ಪಿ. ದೀಪು, ಕಾರ್ಯಕ್ರಮದ ಸಂಯೋಜಕ ಡಾ.ಎನ್.ಜೆ. ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net