12ರಂದು ಸಂಜೆ 6ಕ್ಕೆ ಮುಡಾ ಆಯುಕ್ತ ಆರ್.ಐಶ್ವರ್ಯಾ ನಾಟಕೋತ್ಸವಕ್ಕೆ ಚಾಲನೆ ನೀಡುವರು. ಹಿರಿಯ ವಕೀಲ ಎಚ್.ಬಸವಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ಬನ್ನಂಗಾಡಿ, ಕಾಯಕಯೋಗಿ ಫೌಂಡೇಷನ್‌ನ ಅಧ್ಯಕ್ಷ ಎಂ.ಶಿವಕುಮಾರ್, ಹೊನಗಳ್ಳಿಮಠದ ಅವಿನಾಶ್ ಭಾಗವಹಿಸುವರು. 14ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಸಮಾರೋಪ ಭಾಷಣ ಮಾಡುವರು. ವೈದ್ಯ ಡಾ.ವಿ.ಎಲ್.ನಂದೀಶ್ ಅಧ್ಯಕ್ಷತೆ ವಹಿಸುವರು. ವಕೀಲ ಮಲ್ಲಿಕಾರ್ಜುನಸ್ವಾಮಿ, ಹಿರಿಯ ವಕೀಲರ ಸದಾಶಿವಪ್ಪ ಹೊನಗಳ್ಳಿಮಠ ಭಾಗವಹಿಸುವರು ಎಂದು ಹೇಳಿದರು.