ಜೀವನದ ಪಾಠ ಹೇಳುವ ನಾಟಕಗಳು: ಡಾ.ಇಂದ್ರೇಶ್ ಹೇಳಿಕೆ

ನಾಟಕ
Published on

ಮಂಡ್ಯ: ನಗರದ ಕಲಾಮಂದಿರದಲ್ಲಿ ಶ್ರೀ ಭೈರವೇಶ್ವರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಹಾಸ್ಯಪ್ರದಾನ ‘ಚನ್ನಪ‍್ಪ ಚನ್ನೇಗೌಡ’ ನಾಟಕ ಪ್ರದರ್ಶನವನ್ನು ಭಾನುವಾರ ಪ್ರಸ್ತುತ ಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ಬಿಜೆಪಿ ಮುಖಂಡ ಡಾ.ಇಂದ್ರೇಶ್‌ ಮಾತನಾಡಿ, ನಾಟಕ ಎಂದರೆ ಬರಿ ಕಲೆಯಲ್ಲ ಅದು ಜೀವನದ ಪಾಠ ಹೇಳುತ್ತದೆ. ಇತ್ತೀಚಿನ ದಿನಗಳಲ್ಲಿ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಇದು ಮತ್ತಷ್ಟು ಕಲಾ ಪೋಷಕರು ಮತ್ತು ಕಲಾರಾಧಕರು ಹೆಚ್ಚಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಲೆಗೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲ ಕಲಾವಿದರು ನಿಲ್ಲಬೇಕು. ಪ್ರತಿಯೊಬ್ಬರೂ ಪೌರಾಣಿಕ ಸೇರಿದಂತೆ ಸಾಮಾಜಿಕ ನಾಟಕಗಳಿಗೂ ಪ್ರಾಧಾನ್ಯತೆ ನೀಡಬೇಕು. ಜತೆಗೆ ಹಾಸ್ಯ ನಾಟಕಗಳು ಸಹ ಮನಸನ್ನು ಮುದಗೊಳಿಸುತ್ತವೆ. ಇಂತಹ ಸನ್ನಿವೇಶದಲ್ಲಿಯೂ ಹಿರಿಯ ಕಲಾವಿದರನ್ನು ಗೌರವಿಸುವುದು ಒಂದು ಉತ್ತಮವಾದ ಕೆಲಸವಾಗಿದೆ ಎಂದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಹಿರಿಯ ಕಲಾವಿದರಾದ ರೇವಣ್ಣ, ಡಿ.ವೆಂಕಟರಮಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net