ಪುಸ್ತಕ ಬಹುಮಾನಕ್ಕೆ ರಂಗಭೂಮಿ ಸಂಬಂಧಿತ ಪುಸ್ತಕಗಳ ಆಹ್ವಾನ

Books
Published on

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಪುಸ್ತಕ ಬಹುಮಾನಕ್ಕಾಗಿ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಆಹ್ವಾನಿಸಿದೆ.

2021, 2022 ಹಾಗೂ 2023ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಈ ಬಹುಮಾನಕ್ಕೆ ಪರಿಗಣಿಸಲಿದ್ದು, ಪ್ರತಿ ವರ್ಷಕ್ಕೆ ಒಂದರಂತೆ ಪುಸ್ತಕವನ್ನು ಆಯ್ಕೆ ಮಾಡಿ, ತಲಾ 25 ಸಾವಿರ ನಗದು ಸಹಿತ ಬಹುಮಾನ ನೀಡಲಾಗುತ್ತದೆ. ರಂಗಭೂಮಿಯ ಬೆಳವಣಿಗೆ, ರಂಗಭೂಮಿಯ ವೈವಿಧ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ಕೃತಿಗಳನ್ನು ಜುಲೈ 20ರೊಳಗೆ ಕಳುಹಿಸಬೇಕು.

2021 ಜ. 1ರಿಂದ 2023ರ ಡಿ. 31ರೊಳಗೆ ಪುಸ್ತಕ ಪ್ರಕಟವಾಗಿರಬೇಕು. ಅನುವಾದಿತ ಹಾಗೂ ಮರು ಮುದ್ರಣ

ಡ ಕೃತಿಗಳಿಗೆ ಅವಕಾಶವಿಲ್ಲ. ಕೃತಿಯು ಕನಿಷ್ಟ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ವಿಳಾಸ: ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 02.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net