

ಕೊಪ್ಪಳ: ಕರ್ನಾಟಕ ನಾಟಕ ಅಕಾಡೆಮಿ ಮೂರು ವರ್ಷದ ವಿವಿಧ ಪ್ರಶಸ್ತಿಗಳನ್ನು ಗುರುವಾರ ಘೋಷಿಸಿದೆ. ಜಿಲ್ಲೆಯ ನಾಲ್ವರು ರಂಗ ಸೇವಕರಿಗೆ ವಾರ್ಷಿಕ ಪ್ರಶಸ್ತಿ ಸಂದಿದ್ದು ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ.
2022-23ರಿಂದ 2024-25ನೇ ವರ್ಷದ ಮೂರು ಸಾಲಿನ ಪ್ರಶಸ್ತಿ ಘೋಷಿಸಲಾಗಿದೆ. 2022-23ನೇ ಸಾಲಿನಲ್ಲಿ ಐದು ದಶಕದಿಂದ ರಂಗ ಸೇವೆಯಲ್ಲಿ ನಿರತರಾಗಿರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಕೊಟ್ರಯ್ಯ ಹಿರೇಮಠ ಹಾಗೂ ಯಲಬುರ್ಗಾ ತಾಲೂಕಿನ ಸಂಕನೂರಿನ ಗುರಯ್ಯಸ್ವಾಮಿ ಅವರಿಗೆ ವಾರ್ಷಿಕ ಪ್ರಶಸ್ತಿ ಸಂದಿದೆ. ಇನ್ನು 2023&24ನೇ ಸಾಲಿಗೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಕೆ.ಹುಸೇನ್ಸಾಬ್ ಅವರಿಗೆ ಮತ್ತು 2024-25ನೇ ವರ್ಷದಲ್ಲಿ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ತೋಟಪ್ಪ ಕಾಮನೂರು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.