ರಾಜಗುರುಗೆ ನಾಟಕ ಅಕಾಡೆಮಿ ಪ್ರಶಸ್ತಿ

Natak Akademi Award to Rajaguru
ರಾಜಗುರು ಹೊಸಕೋಟಿ
Published on

ಮಹಾಲಿಂಗಪುರ: ಯುವ ರಂಗ ಕಲಾವಿದ, ಗಾಯಕ ರಾಜಗುರು ಹೊಸಕೋಟೆ ಅವರಿಗೆ 2023 -24 ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಮಹಾಲಿಂಗಪುರದ ಹಿರಿಯ ಜಾನಪದ ಕಲಾವಿದ ಗುರುರಾಜ ಹೊಸಕೋಟಿ ಅವರ ಪುತ್ರ ರಾಜಗುರು ಬೆಂಗಳೂರಿನಲ್ಲಿ ನೆಲೆಸಿ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ರಾಜಗುರು ಅನೇಕ ರಂಗ ನಾಟಕಗಳನ್ನು ರಚಿಸಿ, ನಿರ್ದೇಶನ ಮಾಡಿದ್ದಾರೆ. 5,000ಕ್ಕೂ ಹೆಚ್ಚು ರಂಗ ಪ್ರದರ್ಶನ ನೀಡಿದ್ದಾರೆ. ಅವರು ರಚಿಸಿದ 55 ನಿಮಿಷಗಳ ‘ಪ್ರೇಮಕಥೆ’ ರಾಜ್ಯದ 31 ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದೆ. ಇದು ಪ್ರತಿಷ್ಠಿತ ಲಿಮ್ಕಾ ಬುಕ್ ಆಪ್ ರಿಕಾರ್ಡ್ಸ್‌ದಲ್ಲಿ ದಾಖಲಾಗಿದೆ.

ಕಳೆದ ಸಾಲಿನಲ್ಲಿ ಅವರಿಗೆ ಕೇಂದ್ರ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ದೊರೆತಿತ್ತು.

ನನ್ನ ಮಗ ರಾಜಗುರು ಕ್ರಿಯಾಶೀಲ ರಂಗ ಕಲಾವಿದ. ಆತನ ಪತ್ನಿ ನಯನಾ ಕೂಡಾ ರಂಗ ಕಲಾವಿದೆ. ಇಬ್ಬರೂ ಸೇರಿ ನಾಟಕದ ವೈಭವವನ್ನು ಮರಳಿ ತರುತ್ತಿದ್ದಾರೆ. ಗಿರೀಶ ಕಾರ್ನಾಡ, ಬಿ.ವಿ. ಕಾರಂತರು ಇದ್ದಾಗಿನ ನಾಟಕಗಳ ವೈಭವವನ್ನು ಇವರು ಮರಳಿ ತರಲಿ ಎಂಬುದೇ ನನ್ನ ಆಸೆ.
ಗುರುರಾಜ ಹೊಸಕೋಟಿ, ಖ್ಯಾತ ಜಾನಪದ ಕಲಾವಿದ ಮಹಾಲಿಂಗಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net