ರೈಲ್ವೆ ಇಲಾಖೆಯ ನಸಿರ್ಂಗ್ ಸುಪರಿಂಟೆಂಡೆಂಟ್ ಹುದ್ದೆ ಪರೀಕ್ಷೆ ಸುಸೂತ್ರ

Published on

ಮಂಗಳೂರು: ರೈಲ್ವೇ ಇಲಾಖೆ ನೇಮಕಾತಿ ಪರೀಕ್ಷೆ ಸಂದರ್ಭ ಧರ್ಮ ಸೂಚಕ ಸಂಕೇತಗಳನ್ನು ತೆರವುಗೊಳಿಸದಂತೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರಿನಲ್ಲಿ ರೈಲ್ವೆಯ ನಸಿರ್ಂಗ್ ಸೂಪರಿಂಟೆಂಡೆಂಟ್ ಹುದ್ದೆ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಮಂಗಳವಾರ ಬೋಂದೆಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ರೈಲ್ವೇ ಪರೀಕ್ಷೆ ನಡೆಯಿತು. ಒಟ್ಟು 3 ಬ್ಯಾಚ್‌ನಲ್ಲಿ ಪರೀಕ್ಷೆ ನಡೆಸಲು ರೈಲ್ವೇ ಪರೀಕ್ಷಾ ಮಂಡಳಿ ತೀರ್ಮಾನಿಸಿದ್ದು, ಬೆಳಗ್ಗೆ ಮಧ್ಯಾಹ್ನ ಹಾಗೂ ಮಧ್ಯಾಹ್ನದ ನಂತರ ಸೂಪರಿಂಟೆಂಡೆಂಟ್ ಹುದ್ದೆ ಪರೀಕ್ಷೆ ನಡೆಯಿತು. ನೂರಾರು ಪರೀಕ್ಷಾರ್ಥಿಗಳು ಆಗಮಿಸಿದ್ದು, ಮಂಗಳೂರು ಪೊಲೀಸ್ ಹಾಗೂ ರೈಲ್ವೆ ವಿಭಾಗದ ಪೊಲೀಸರು ಪರೀಕ್ಷಾ ಭದ್ರತೆಯ ಮೆಲ್ವಿಚಾರಣೆ ನಡೆಸಿದ್ದರು. ಬಿಗಿ ತಪಾಸಣೆಯ ಜತೆಗೆ ಪರಿಕ್ಷಾ ಪ್ರವೇಶ ಪತ್ರ ತಪಾಸಣೆ, ಮೂಕಲ ದಾಖಲೆ ಪರಿಶೀಲನೆ ನಡೆಯಿತು.

ಪರೀಕ್ಷೆ ಬರೆಯಬೇಕಾದರೆ ಧಾರ್ಮಿಕ ಚಿನ್ಹೆಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಸೂಚಿಸಿರುವ ವಿಚಾರವನ್ನು ಇಲಾಖೆಯ ಆದೇಶದಂತೆ ತೆಗೆದುಹಾಕಲಾಗಿತ್ತು. ಈ ಬಗ್ಗೆ ಯಾವುದೇ ಗೊಂದಲವಾಗದಂತೆ ತಡೆಯಲು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು. ಪರೀಕ್ಷೆ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತ ಸಂಸದರ ಕಚೇರಿ ಸಿಬ್ಬಂದಿಗಳೂ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net