ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ

IMG_20241018_194650_423.jpg
Published on

ಹುಬ್ಬಳ್ಳಿ: ಹುಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರನ್ನು ಭೇಟಿ ಮಾಡಿದ ಎಸ್.ಎಸ್. ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಹಾಗೂ ಪದಾಧಿಕಾರಿಗಳು ಫೌಂಡೇಷನ್ ನಿಂದ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.

"ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ'ದ ಮುಂಬರುವ ಯೋಜನೆಗಳು ಹಾಗೂ ಯುವ ಜನಾಂಗವನ್ನು ನಶೆಯಿಂದ ಹೊರತರಲು ರೂಪಿಸಬಹುದಾದ ಕಾರ್ಯಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು.

ಫೌಂಡೇಷನ್ ಸದಸ್ಯರಾದ ಸಿದ್ದು ಪಣ್ಣವರ, ನಂದೀಶ ವಡ್ಡಟ್ಟಿ, ರಾಘು ನೀರಗಟ್ಟಿ, ವಿನಯ ಸಜ್ಜನ, ಶ್ರೀಕಾಂತ ಶೆಟ್ಟರ್, ವಿನೋದ ಬಂಕಾಪುರ, ಕಾತಿರ್ಕ ಶೆಟ್ಟಿ, ನಿತೀಶ ನಂದಿಹಾಳ, ಮಾಂತೇಶ ನಾಶಿ, ಸಾಯಿ ಪ್ರಭು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net