ಪಾಲಕರ ಶ್ರಮ ಮಕ್ಕಳು ಅರಿಯಬೇಕು, ಎಸ್ ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಅಭಿಮತ

IMG_20241108_205848_988.jpg
Published on

ಹುಬ್ಬಳ್ಳಿ: ಮಕ್ಕಳು ವಿದ್ಯಾವಂತರಾಗಿ ಆರೋಗ್ಯವಂತರಾಗಿ ಮನೆ ಮತ್ತು ದೇಶಕ್ಕೆ ಹೆಸರು ತರುವಂತವರಾಗಬೇಕು ಎಂದು ತಂದೆ ತಾಯಿಯರು ಸಾಕಷ್ಟು ಶ್ರಮ ವಹಿಸಿ ಮಕ್ಕಳನ್ನು ಬೆಳೆಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ದುಶ್ಚಟಗಳ ದಾಸರಾಗುತ್ತಿರುವುದು ವಿಪರ್ಯಾಸ ಎಂದು ಎಸ್ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಹೇಳಿದರು.

ನಗರದ ಉಣಕಲ್ಲ ಶ್ರೀ ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ ಶೆಟ್ಟರ್ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಶ್ರದ್ಧೆಯಿಂದ ವಿದ್ಯೆಯನ್ನು ಕಲಿತು ದೇಶದ ಹೆಮ್ಮೆಯ ನಾಗರಿಕರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತವರಾಗಬೇಕು. ದುಶ್ಚಟಗಳಿಂದ ದೂರವಿದ್ದು ಸಮಾಜವನ್ನು ನಶೆಯಿಂದ ಮುಕ್ತಿಗೊಳಿಸಬೇಕು ಎಂದು ಮನವಿ ಮಾಡಿದರು.

ವಕೀಲ ಮಧು ಗೋಟುರೆ, ವೈದ್ಯ ಕಾಮೇಶ್ ಜಾಲಿಕಾರ, ಆರಕ್ಷಕ ವಿ.ಎಸ್. ರಾಯಪುರ ಮಾತನಾಡಿದರು.

ಎಸ್.ಎಂ. ಸೋಮನಗೌಡ್ರ, ಆರ್.ಎಸ್. ಹನ್ನಿ, ರಮೇಶ ಮಾದೇವಪ್ಪನವರ, ಶಿವಾನಂದ ಹೆಬಸೂರ, ಬಸಣ್ಣ ಹೆಬ್ಬಳ್ಳಿ, ಶಿವಪ್ಪ ನಾಗೋಜಿ, ಮಲ್ಲಪ್ಪ ತಡಸದ, ಸೋಮು ಪಾಟೀಲ್, ಶಿವಣ್ಣ ಹಂಗರಕಿ, ನಿಂಗಪ್ಪ ಸವದತ್ತಿ, ಫೌಂಡೇಷನ್ ಸದಸ್ಯರಾದ ನಂದೀಶ ವಡ್ಡಟ್ಟಿ, ಮಹಾಂತೇಶ ತಾವರೆ, ವಿನೋದ ಬಂಕಾಪುರ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net