ಉಪ ವಿಭಾಗಾಧಿಕಾರಿಯಾಗಿ ನರ್ವಾಡೆ ವಿನಾಯಕ್

narvade vinayak
Published on

ಮಡಿಕೇರಿ: ಕೊಡಗು ಜಿಲ್ಲೆಗೆ ಉಪ ವಿಭಾಗಾಧಿಕಾರಿಯಾಗಿ ನರ್ವಾಡೆ ವಿನಾಯಕ್‌ರವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.


ವಿನಾಯಕ್‌ರವರು ೨೦೨೧ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇದುವರೆಗೆ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಯತೀಶ್ ಉಲ್ಲಾಳ್‌ರವರು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವರಾಗಿ(ಆಡಳಿತ) ವರ್ಗಾವಣೆಯಾಗಿದ್ದಾರೆ. ಕಳೆದ ೧ ವರ್ಷ ೧೦ ತಿಂಗಳ ಕಾಲ ಕೊಡಗು ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಯತೀಶ್ ಉಲ್ಲಾಳ್ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net