ನೃತ್ಯ ವಿದ್ಯಾಪೀಠ ವತಿಯಿಂದ ನ.25 ರಂದು ನರ್ತನ ಮೈತ್ರಿ ಕಾರ್ಯಕ್ರಮ

bharata natya
Published on

ಮೈಸೂರು: ನೃತ್ಯ ವಿದ್ಯಾಪೀಠ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸ್ ಅಂಡ್ ಇಂಡಿಯನ್ ಆರ್ಟ್ಸ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ನರ್ತನ ಮೈತ್ರಿ’ ಕಾರ್ಯಕ್ರಮವನ್ನು ನ.25 ರಂದು ಸಂಜೆ 5.30ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಗುರು ವಿದುಷಿ ಸಿ.ಎನ್.ಅನಿತಾ ಅವರ ಮಾರ್ಗದರ್ಶನದಲ್ಲಿ 12 ವರ್ಷಗಳಿಂದ ಭರತನಾಟ್ಯ ಅಭ್ಯಸಿಸುತ್ತಿರುವ ವಿದ್ವತ್ ಹಂತದ ಕಲಾವಿದೆಯರು ವಿಶೇಷ ನೃತ್ಯ ಪ್ರದರ್ಶಿಸಲಿದ್ದಾರೆ.

ವೈಷ್ಣವಿ ಎಲ್.ಅರಸ್, ಎಸ್.ರಕ್ಷಿತಾ, ಡಿ.ವಿ.ಎಸ್.ಕೆ.ಶ್ರೀಹರಿ ಪ್ರಿಯಾ, ನಯನಾ ನಾಗರಾಜ್, ಎಸ್,ಅನರ್ಘಾ ನೃತ್ಯ ಪ್ರದರ್ಶಿಸಲಿದ್ದಾರೆ. ಇವರಿಗೆ ವಿದುಷಿ ಸಿ.ಎನ್.ಅನಿತಾ(ನೃತ್ಯ ಸಂಯೋಜನೆ ಮತ್ತು ನಟುವಾಂಗ), ವಿದ್ವಾನ್ ರಾಕೇಶ್ ಸುಧೀರ್(ಹಾಡುಗಾರಿಕೆ), ವಿದ್ವಾನ್ ತುಮಕೂರು ಬಿ.ಶಶಿಶಂಕರ್(ಮೃದಂಗ), ವಿದ್ವಾನ್ ಶಶಾಂಕ್ ಜೋಡಿದಾರ್(ವೇಣುವಾದನ) ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಚಾಲನೆ ನೀಡಲಿದ್ದಾರೆ. ನೃತ್ಯಾಲಯ ಟ್ರಸ್ಟ್ ಅಧ್ಯಕ್ಷೆ ನೃತ್ಯ ಗುರು ಡಾ.ತುಳಸಿ ರಾಮಚಂದ್ರ, ಶೋಭಾ ಬಾಲಕೃಷ್ಣ, ಜಿ.ಕೆ.ಕಮಲ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net