ಬಂಟ್ವಾಳ ತಾಲೂಕು ಮಟ್ಟಕ್ಕೆ ನಾರ್ಶ ಮೈದಾನ ಶಾಲೆಯ ವಾಲಿಬಾಲ್ ತಂಡ

PTR_18 AUG_1
Published on

ವಿಟ್ಲ: ಸುರಿಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಂಚಿ ವಲಯ ಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ನಾರ್ಶ ಮೈದಾನದ ಸರಕಾರಿ ಪ್ರೌಢಶಾಲೆ ತಂಡವು ಪ್ರಥಮ ಸ್ಥಾನ ಪಡೆದು ಬಂಟ್ಟಾಳ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.

ತಂಡ ನಾಯಕಿ ಶಿಫಾನ, ತಂಡದ ವ್ಯವಸ್ಥಾಪಕಿ ಭಾರತಿ ಕೈರಂಗಳ, ಮುಖ್ಯ ಶಿಕ್ಷಕಿ ಲತಾ, ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ರಫೀಕ್, ಸಹಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಅವರ ಮಾರ್ಗದರ್ಶನದಲ್ಲಿ ತಂಡ ತರಬೇತಿಯನ್ನು ಪಡೆದಿತ್ತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಲೈಮಾನ್ ನಾರ್ಶ ಸಹಕಾರ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net