

ಅನ್ಸಾರ್ ಇನೋಳಿ ಉಳ್ಳಾಲ
ಮನೆಯಲ್ಲೇ ಕಸ ನಿರ್ವಹಣೆ ನಿಟ್ಟಿನಲ್ಲಿ ಮನೆಗಳಲ್ಲಿ ಜಾಗೃತಿಯ ಬೀಜ ಬಿತ್ತುತ್ತಿರುವ ನರಿಂಗಾನ ಗ್ರಾಮ ಪಂಚಾಯಿತಿ ಆಡಳಿತಗಾರರು ವರ್ಷಾಂತ್ಯಕ್ಕೆ ಗುರಿ ಮುಟ್ಟುವ ಕನಸಿನೊಂದಿಗೆ ಮುಂದಡಿ ಇಟ್ಟಿದ್ದಾರೆ.
ಶೂನ್ಯ ಕಸ ಮನೆ ನಿರ್ವಾಣ ನಿಟ್ಟಿನಲ್ಲಿ ಈಗಾಗಲೇ ಪಂಚಾಯಿತಿ ಕೆಲಸ ಆರಂಭಿಸಿದೆ. ಈಗಾಗಲೇ ಸಂ ಸಂಸ್ಥೆಗಳ ಸಭೆ ನಡೆಸಲಾಗಿದ್ದು, ನೂರು ಬ್ಯಾನರ್‌ಗಳನ್ನು ತಯಾರಿಸಿ ಗ್ರಾಮಾದ್ಯಂತ ಅಳವಡಿಸಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲಕ 1,500 ಘೋಷಣಾ ಪತ್ರಗಳನ್ನು ಮನೆಗಳಿಗೆ ಹಂಚಲಾಗಿದೆ. ಶಾಲೆಗಳಲ್ಲಿ ಎರಡು ಸುತ್ತಿನ ಜಾಗೃತಿ ಕಾರ್ಯಕ್ರಮ ನಡೆದಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಕೇರಳ ಕರ್ನಾಟಕ ಗಡಿಭಾಗದಲ್ಲಿ ವಾನವ ಸರಪಳಿ ನಡೆಸಲು ಯೋಜನೆ ರೂಪಿಸಲಾಗಿದ್ದು, ಸಂ-ಸಂಸ್ಥೆಗಳು, ನಾಗರಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಪಡೆಯಲು ಯೋಚಿಸಲಾಗಿದೆ. ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಒಂದೊಂದು ಮನೆಗೆ ತೆರಳಿ ಜಾಗೃತಿ ಮೂಡಿಸುವ ಜವಾಬ್ದಾರಿ ನೀಡುವ ಯೋಚನೆಯೂ ಗ್ರಾಮ ಪಂಚಾಯಿತಿಯದ್ದು.
ಘೋಷಣಾ ಪತ್ರ ಬಳಕೆ
ಶೂನ್ಯ ಕಸ ಮನೆ ನಿರ್ವಾಣಕ್ಕೆ ೋಷಣಾ ಪತ್ರವನ್ನು ವಾನದಂಡವಾಗಿ ಬಳಸಲಾಗುತ್ತಿದೆ. ಘೋಷಣಾ ಪತ್ರ ನೀಡಿದ ಮನೆಗಳಲ್ಲಿ ಹಸಿ ಮತ್ತು ಒಣಕಸ, ದ್ರವತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ವಾಡಲಾಗುತ್ತದೆ ಎಂದು ಘೋಷಿಸಬೇಕಾಗುತ್ತದೆ. ಘೋಷಣಾ ಪತ್ರದಲ್ಲಿ ಹಸಿ, ಒಣ, ಅಪಾಯಕಾರಿ ಕಸ ನಿರ್ವಹಣಾ ವ್ಯವಸ್ಥೆ ವಾಡಲಾಗಿದೆಯೇ, ಇಂಗುಗುಂಡಿ, ದ್ರವತ್ಯಾಜ್ಯ ಗುಂಡಿ ಇದೆಯೇ ಎನ್ನುವ ವಾಹಿತಿ ನೀಡಬೇಕು. ಹಸಿಕಸ ಮನೆಯಲ್ಲೇ ಗೊಬ್ಬರ ವಾಡಿ, ಒಣಕಸ ಮರುಬಳಕೆ, ಗುಜರಿಗೆ ಇಲ್ಲವೇ ಪಂಚಾಯಿತಿ ವಾಹನಕ್ಕೆ ನೀಡಬೇಕಾಗುತ್ತದೆ.
ಘೋಷಣಾ ಪತ್ರದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಹಿ ಮತ್ತು ಮೊಹರು ಹಾಕಿರಬೇಕು. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಸಂಜೀವಿನಿ ಒಕ್ಕೂಟ, ಬಾಲ ವಿಕಾಸ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮೂರು ಹಂತಗಳಲ್ಲಿ ಮನೆ ಭೇಟಿ ನೀಡಿ ವಾಹಿತಿಯ ಜತೆ ವಿವಿಧ ಕಸ ನಿರ್ವಹಣೆಗೆ ವ್ಯವಸ್ಥೆ ವಾಡಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಖಾತರಿಪಡಿಸಲಿದ್ದಾರೆ. ಅರಿವು ಮೂಡಿಸುವ ಕಾರ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕೈ ಜೋಡಿಸಲಿದ್ದಾರೆ. ಈಗಾಗಲೇ ಹತ್ತು ಮಂದಿ ಆಶಾ ಕಾರ್ಯಕರ್ತೆಯರು ಪಂಚಾಯಿತಿಗೆ ಘೋಷಣಾ ಪತ್ರ ನೀಡಿದ್ದಾರೆ.
ಜಾರಿಗೆ ಬಾರದ ಸೂಚನೆ
ಜಿಲ್ಲೆಯನ್ನು ಕಸಮುಕ್ತಗೊಳಿಸಲು ಜನಶಿಕ್ಷಣ ಟ್ರಸ್ಟ್ ವತಿಯಿಂದ 2017-18ರಲ್ಲಿ ಮನೆಗಳಲ್ಲೇ ಕಸ ನಿರ್ವಹಣೆಗೆ ಘೋಷಣಾ ಪತ್ರ ಪ್ರಯೋಗ ಜಾರಿಗೆ ತರಲಾಗಿತ್ತು. ಇದಕ್ಕಾಗಿ ಆ ಸಮಯದಲ್ಲಿ ಬಂಟ್ವಾಳ ತಾಲೂಕಿನ ಬಾಳೆಪುಣಿ, ಪುತ್ತೂರಿನ ಬನ್ನೂರು ಮತ್ತು ಬೆಳ್ತಂಗಡಿಯ ಲಾಲ ಸಹಿತ 50 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ವಾಡಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಮನೆ ಯಜವಾನ ನೀಡುವ ಘೋಷಣಾ ಪತ್ರದಲ್ಲಿ ಪಂಚಾಯಿತಿ ಸದಸ್ಯರು, ಪ್ರೇರಕರು, ಅಂಗನವಾಡಿ ಆರೋಗ್ಯ ಕಾರ್ಯಕರ್ತರು, ಶಾಲಾ ಶಿಕ್ಷಕರು, ಸಂ ಸಂಸ್ಥೆಗಳ ಪ್ರತಿನಿಧಿಗಳ ಸಹಿ ಇರಬೇಕಿತ್ತು. ಗ್ರಾಮ ವಿಕಾಸ ಕೇಂದ್ರದ ಯಶೋದಾ ಲಾಲ, ಅರುಣಾ ಬನ್ನೂರು, ಜಯ ಬಾಳೆಪುಣಿ ಅವರು ಪ್ರೇರಕರಾಗಿದ್ದರು. ಮೂರು ಕಡೆಗಳಲ್ಲಿ 200 ಮನೆಗಳಂತೆ ವಾಡಿದ ಘೋಷಣಾ ಪತ್ರ ಪ್ರಯೋಗ ಯಶಸ್ವಿಯಾಗಿತ್ತು. ಇದೇ ವಾದರಿ ರಾಜ್ಯದಾದ್ಯಂತ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ೋಷಣಾ ಪತ್ರ ಜಾರಿಗೆ ತರುವಂತೆ ಜನಶಿಕ್ಷಣ ಟ್ರಸ್ಟ್ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಅನುಮೋದನೆ ನೀಡಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ 2018ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಗೆ ಪತ್ರ ಬರೆದು ಜಾರಿಗೆ ತರುವಂತೆ ಸೂಚಿಸಿದ್ದರೂ ಇದುವರೆಗೆ ಜಾರಿಗೆ ಬಂದಿಲ್ಲ.
ಗ್ರಾಮದಲ್ಲಿ ಡಿಸೆಂಬರ್ 31ರೊಳಗೆ ಶೂನ್ಯಕಸ ಮನೆ ಯೋಜನೆ ಶೇ.100ರಷ್ಟು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಪ್ರಥಮ ಹಂತದಲ್ಲಿ ಹತ್ತು ಮಂದಿ ಆಶಾ ಕಾರ್ಯಕರ್ತೆಯರು ಘೋಷಣಾ ಪತ್ರ ನೀಡಿದ್ದಾರೆ. ಹಲವು ಮನೆಗಳ ದ್ರವತ್ಯಾಜ್ಯ ನಿರ್ವಹಣೆಗಾಗಿ 18 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್‌ಗೆ ಎರಡರಂತೆ ದ್ರವತ್ಯಾಜ್ಯ ಗುಂಡಿ ನಿರ್ವಾಣ ವಾಡಲಾಗಿದೆ. - ಮಹಮ್ಮದ್ ನವಾಝ್, ನರಿಂಗಾನ ಗ್ರಾ.ಪಂ. ಅಧ್ಯಕ್ಷರು ಶೂನ್ಯಕಸ ಮನೆ ಘೋಷಣಾ ಪತ್ರ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ 2018ರಲ್ಲೇ ಅನುಮೋದನೆ ನೀಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಪತ್ರ ಬರೆದಿದ್ದರು. ಈ ನಿಯಮ ಅಂದೇ ಅನುಸರಿಸಿದ್ದರೆ ಇಂದು ಬಯಲು ಕಸಾಲಯ ಇರುತ್ತಿರಲಿಲ್ಲ. - ಶೀನ ಶೆಟ್ಟಿ, ನರೇಗಾದ ವಾಜು ಒಂಬುಡ್ಸ್‌ಮನ್ https://www.vijayavani.net/avoid-negative-thinking-with-japanushtana https://www.vijayavani.net/notice-for-illegal-residual-demolition-of-buildings