ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿ

nari syari
Published on

ಮಡಿಕೇರಿ:

ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿ ಆಗುವುದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸ್ ಮಾಡಲು ಸಹಕಾರಿ ಆಗುತ್ತದೆ ಎಂದು ಗಾಳಿಬೀಡು ಗ್ರಾ.ಪಂ. ಅಧ್ಯಕ್ಷೆ ಬಿ.ಡಿ. ಪುಷ್ಪಾವತಿ ಹೇಳಿದರು. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಗಾಳಿಬೀಡು ಗ್ರಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಡಿಕೇರಿ ತಾಲೂಕು ವ್ಯಾಪ್ತಿಯ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಐವರು ವಿಜೇತರ ಲಕ್ಕಿಡಿಪ್ ಮೂಲಕ ಆಯ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈಗಿನ ತಲೆಮಾರು ಪತ್ರಿಕೆಗಳನ್ನು ಕೊಂಡು ಓದುವುದನ್ನೇ ಮರೆತುಬಿಟ್ಟಂತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ವಿವಿಧ ಮೂಲಗಳಿಂದ ಪ್ರತಿದಿನವೂ ಸುದ್ದಿಯ ಹರಿವು ಇದ್ದರೂ ಪತ್ರಿಕೆಗಳಲ್ಲಿ ಬರುವ ಸುದ್ದಿ ಹೆಚ್ಚು ವಿಶ್ವಾಸಾರ್ಹತೆಯಿಂದ ಕೂಡಿರುತ್ತದೆ. ಪತ್ರಿಕೆಗಳನ್ನು ಓದುವ ಮೂಲಕ ಭಾಷಾ ಕೌಶಲ್ಯ ಹೆಚ್ಚಿಸಿಕೊಳ್ಳಬಹುದು. ಸಂಪಾದಕೀಯ ಪುಟ ಸೇರಿದಂತೆ ಪತ್ರಿಕೆಗಳಲ್ಲಿ ಬರುವ ಅಂಕಣಗಳನ್ನು ನಿಯಮಿತವಾಗಿ ಓದುವುದರಿಂದ ಶಬ್ದಕೋಶ, ವ್ಯಾಕರಣ, ಓದುವ ಗ್ರಹಿಕೆ ಸುಧಾರಿಸಲು ಸಹಾಯ ಮಾಡುತ್ತದೆ.

ಮನೆಗಳಲ್ಲಿ ಪೋಷಕರಿಗೆ ಪತ್ರಿಕೆ ಓದುವ ಹವ್ಯಾಸ ಇದ್ದರೆ ಮಕ್ಕಳಿಗೂ ಈ ಅಭ್ಯಾಸ ಸುಲಭವಾಗಿ ಬರುತ್ತದೆ. ಈ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಜನಸಾಮಾನ್ಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಓದುವ ಹವ್ಯಾಸ ಬೆಳೆಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿರುವುದು ಸ್ವಾಗತಾರ್ಹ ಎಂದರು.

ಗಾಳಿಬೀಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಎ. ಶಶಿಕಿರಣ್ ಮಾತನಾಡಿ, ದಿನಪತ್ರಿಕೆಗಳನ್ನು ಓದುವುದು ಎಲ್ಲಾ ವಯಸ್ಸಿನವರಿಗೂ ಬಹು ವಿಧಧ ಪ್ರಯೋಜನಗಳನ್ನು ನೀಡುವ ಉತ್ತಮ ಅಭ್ಯಾಸವಾಗಿದೆ. ಇಂದಿನ ವೇಗದ ಜಗತ್ತಿನಲ್ಲಿ ನಾವು ಹೆಚ್ಚು ಹೆಚ್ಚು ಮಾಹಿತಿ ಹೊಂದಿರುವುದು ಹಿಂದೆAದಿಗಿAತಲೂ ಹೆಚ್ಚು ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಪತ್ರಿಕೆಗಳು ಮಾಹಿತಿ ಮತ್ತು ಜ್ಞಾನದ ಅತ್ಯುತ್ತಮ ಮೂಲವಾಗಿ ಕಾರ್ಯನಿರ್ವಹಿಸುತ್ತಿವೆ.

ಪತ್ರಿಕೆಗಳು ಸ್ಥಳೀಯ, ರಾಷ್ಟಿçÃಯ ಹಾಗೂ ಜಾಗತಿಕವಾಗಿ ಪ್ರಸ್ತುತ ಘಟನೆಗಳ ಕುರಿತು ಓದುಗರನ್ನು ಮಾಹಿತಿಯುಕ್ತರನ್ನಾಗಿಸುತ್ತವೆ. ರಾಜಕೀಯ, ಅರ್ಥಶಾಸ್ತ್ರ, ಕ್ರೀಡೆ, ವಿಜ್ಞಾನ ಹಾಗೂ ಮನರಂಜನೆಯAಥ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿರುತ್ತದೆ. ಓದುಗರಿಗೆ ತಮ್ಮ ಸುತ್ತಲಿನ ಪ್ರಪಂಚದ ಸಮಗ್ರ ತಿಳುವಳಿಕೆಯನ್ನು ಕೊಡುತ್ತದೆ. ಪತ್ರಿಕೆಗಳು ಸ್ಫೂರ್ತಿ ಮತ್ತು ಆಲೋಚನೆಗಳನ್ನು ಸಹ ನೀಡುತ್ತವೆ. ನಾವೀನ್ಯತೆ, ಸಾಮಾಜಿಕ ಕಾರ್ಯ ಮತ್ತು ವೈಯಕ್ತಿಕ ಸಾಧನೆಗಳ ಕುರಿತಾದ ಕಥೆಗಳು ಓದುಗರನ್ನು ತಮ್ಮ ಗುರಿಗಳನ್ನು ಸೇರಲು ಮತ್ತು ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಪ್ರೇರೇಪಿಸುತ್ತದೆ.

ಮನೆಗಳಲ್ಲಿ ಮಹಿಳೆಯರು ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಈ ಮೂಲಕ ಮಕ್ಕಳಿಗೂ ಪತ್ರಿಕೆ ಓದುವುದಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಸಾಕಷ್ಟು ಕಾರ್ಯಕ್ರಮಗಳನ್ನು ಆಗಾಗ್ಗೆ ಹಮ್ಮಿಕೊಂಡು ಮನೆಮಾತಾಗಿದೆ ಎಂದು ಹೇಳಿದರು.

ಪಂಚಾಯಿತಿ ಸಿಬ್ಬಂದಿ ಯಶೋಧ, ಮನುಕುಮಾರ್, ಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net