

ಹುಬ್ಬಳ್ಳಿ: ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಧಾರವಾಡ ವಿಭಾಗ, ಹುಬ್ಬಳ್ಳಿ ಧಾರವಾಡ ಬಂಟರ ಸಂ, ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ಪರಿಸರಕ್ಕಾಗಿ ನಾರಿ ಶಕ್ತಿ ಸಮಾವೇಶವನ್ನು ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ 8ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಸಚಿವೆ ಅನುರಾಧ ವಸ್ತ್ರದ ಸಮಾವೇಶ ಉದ್ಘಾಟಿಸುವರು. ಮಾತಾಶ್ರಮದ ಮಾತಾಜಿ ತೇಜೋಮಯಿ ಅವರು ಸಾನ್ನಿಧ್ಯ ವಹಿಸುವರು. ಬಂಟರ ಸಂದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಹಸಿರು ಮನೆ, ಔಷಧಿ ಸಸ್ಯಗಳು ಮತ್ತು ಮನೆಮದ್ದು, ಋತುಚಕ್ರ ಜಾಗೃತಿ, ಗರ್ಭಕೊರಳಿನ ಕ್ಯಾನ್ಸರ್ ಚಿಕಿತ್ಸೆ ಮತ್ತು ಲಸಿಕೆ ಈ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳಾದ ಜಯರಾಮ ಬೊಳ್ಳಾಜೆ, ಉಮಾಪತಿ ಭಟ್, ದಿವ್ಯ ಗೋಕರ್ಣ ಹಾಗೂ ಡಾ. ಸುಮಂಗಲಾ ಬೀರನೂರ ಅವರು ಮಾತನಾಡುವರು.
ಪರಿಸರ ಮತ್ತು ಕಾನೂನು ಕುರಿತು ಮಧು ಗೋಟುರಿ ಮಾತನಾಡಲಿದ್ದು, ನಂತರ ಸಮಾರೋಪ ನಡೆಯಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆ ಕೋರಿದೆ.