

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಓದುಗರನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಪ್ರಸಾರದೊಟ್ಟಿಗೆ ವಿವಿಧ ಸ್ಪರ್ಧೆ, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ ಧ್ವನಿಯಾಗಿ ವಿಜಯವಾಣಿ ಪತ್ರಿಕೆ ಕೆಲಸ ಮಾಡುತ್ತಿದೆ ಎಂದು ‘ನಾರಿ ನಿನಗೊಂದು ಸಾರಿ’ ವಿಜೇತರು ಪತ್ರಿಕೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ವಿಜಯವಾಣಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಾರಿ ನಿನಗೊಂದು ಸಾರಿ’ ಸ್ಪರ್ಧೆಯ ಬಹುಮಾನ ಸ್ವೀಕರಿಸಿ ಅನಿಸಿಕೆ ಹಂಚಿಕೊಂಡ ಅವರು, ಮಹಾನವಮಿ ದಿನಗಳಲ್ಲಿ ನವೋಲ್ಲಾಸ ಕಾರ್ಯಕ್ರಮ ಹಮ್ಮಿಕೊಂಡು ದಿನದ ಬಣ್ಣವಿರುವ ಸಾರಿಯೊಟ್ಟಿಗಿನ ಮಹಿಳೆಯರ ಫೋಟೋ ಪ್ರಕಟಿಸಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವ ಕಾರ್ಯ ಮಾಡುತ್ತಿದೆ ವಿಜಯವಾಣಿ. ಸುದ್ದಿಯಲ್ಲಿ ರಾಜಿ ಮಾಡಿಕೊಳ್ಳದೇ ನಿಷ್ಠೆಯಿಂದ ಕೆಲಸ ಮಾಡುತ್ತಿದೆ. ಕೇವಲ 1 ರೂಪಾಯಿಯಲ್ಲಿ ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ ವಿತರಿಸಿ ಓದುವ ಮಕ್ಕಳ ಜ್ಞಾನ ಹೆಚ್ಚಳ ಹಾಗೂ ಸ್ಪರ್ಧಾತ್ಮಕ ಪರೀಕ್ಷಗೆ ತಯಾರಿ ನಡೆಸುವವರಿಗೆ ಅನುಕೂಲ ಒದಗಿಸಿದೆ. ನಮ್ಮ ಸುತ್ತಮುತ್ತಲಿನ ಸಮಸ್ಯೆ ಪ್ರಕಟಿಸುವ ಮೂಲಕ ಸಮಸ್ಯೆ ಸರಿಪಡಿಸುವ ಕೆಲಸ ಮಾಡುತ್ತಿದೆ. ಗುಣಮಟ್ಟದಲ್ಲಿ ಎಲ್ಲರಿಗಿಂತ ವಿಜಯವಾಣಿ ಮೊದಲಿದೆ ಎಂದು ತಿಳಿಸಿದರು.
ಬೆಳಗಾವಿ ವಿಜಯವಾಣಿ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಮಾತನಾಡಿ, ವಿಜಯವಾಣಿ ಬಳಗ ಮಹಿಳೆಯರಿಗಾಗಿಯೇ ಏರ್ಪಡಿಸಿದ್ದ ‘ನಾರಿ ನಿನಗೊಂದು ಸಾರಿ’ ಸ್ಪರ್ಧೆಯಲ್ಲಿ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸ. ಏಜುಕೇಷನ್ ಎಕ್ಸ್ ಪೋ ಹಮ್ಮಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ತೋರುತ್ತಿದೆ. ಇವೆಲ್ಲವುಗಳ ಜತೆಗೆ ಈಚೆಗೆ ‘ಪ್ರೆಸ್ ವಿಜಿಟ್’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಪತ್ರಿಕೆ ಸಿದ್ಧಗೊಳ್ಳುವ ಪ್ರಕ್ರಿಯೆಯನ್ನು ಜನರಿಗೆ ನೇರವಾಗಿ ತಿಳಿಸುವ ಕಾರ್ಯ ಮಾಡುತ್ತಿದೆ ಎಂದರು.
ವಿಜಯವಾಣಿ ದಿನಪತ್ರಿಕೆ ಹಮ್ಮಿಕೊಂಡಿರುವ ‘ನಾರಿ ನಿನಗೊಂದು ಸಾರಿ’ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ. ಪತ್ರಿಕೆಯಿಂದ ದೂರ ಇದ್ದವರನ್ನು ಪತ್ರಿಕೆ ಕೊಂಡು ಓದುವಂತೆ ಮಾಡಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿ, ಅಂಕಣ ಅಚ್ಚುಕಟ್ಟಾಗಿ ಮೂಡಿಬರುತ್ತಿವೆ. ಡಾ.ವಿಜಯ ಸಂಕೇಶ್ವರ ಹಾಗೂ ಡಾ.ಆನಂದ ಸಂಕೇಶ್ವರ ಅವರು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಕೆಲಸ. ವಿಜಯವಾಣಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ಸದಾ ಮುಂದುವರಿಯಲಿ. ‘ನಾರಿ ನಿನಗೊಂದು ಸಾರಿ’ ವಿಜೇತರಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ರೇಣುಕಾ ಮಹಾಂತೇಶ ಕೋಟಗಿ ಚನ್ನಮ್ಮನ ಕಿತ್ತೂರ ವಿಜಯವಾಣಿ ‘ನಾರಿ ನಿನಗೊಂದು ಸಾರಿ’ ಸೇರಿ ಅನೇಕ ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿ ಹಮ್ಮಿಕೊಂಡು ಮಹಿಳೆಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಓದುಗರಿಗೆ ಕುಳಿತಲ್ಲೇ ವಿಶ್ವದ ಸಮಗ್ರ ಮಾಹಿತಿ ನೀಡುವ ಜವಾಬ್ದಾರಿ ಕೆಲಸ ಮಾಡುವುದರೊಟ್ಟಿಗೆ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತಸ. ಇಂತಹ ಕಾರ್ಯಕ್ರಮಗಳನ್ನು ವಿಜಯವಾಣಿ ಬಳಗ ನಿರಂತರ ಹಮ್ಮಿಕೊಳ್ಳಬೇಕು. ‘ನಾರಿ ನಿನಗೊಂದು ಸಾರಿ’ ವಿಜೇತೆಯಾಗಿರುವುದು ಸಂತಸ ತಂದಿದೆ. ಇಂತಹ ಅವಕಾಶ ಕಲ್ಪಿಸಿದ ವಿಜಯವಾಣಿ ಬಳಗಕ್ಕೆ ಧನ್ಯವಾದ. ಪದ್ಮಶ್ರೀ ಅನಗೋಳ್ಕರ, ರಾಮಲಿಂಗಕಿಂಡಗಲ್ಲಿ, ಬೆಳಗಾವಿ