

ರಾಣೆಬೆನ್ನೂರ: ಕನ್ನಡದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅದೃಷ್ಟಶಾಲಿಗಳನ್ನು ನಗರದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಆಯ್ಕೆ ಮಾಡಲಾಯಿತು.
ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹಾಗೂ ಆರೋಹಣ ಸಂಸ್ಥೆ ಅಧ್ಯಕ್ಷೆ ಡಾ. ರತ್ನಪ್ರಭಾ ಕೆಂಚಪ್ಪನವರ ಅವರು ಅದೃಷ್ಟಶಾಲಿಗಳನ್ನು ಕೂಪನ್ ಎತ್ತುವ ಮೂಲಕ ಆಯ್ಕೆ ಮಾಡಿದರು. ಪ್ರಮುಖರಾದ ವಿಜಯಾ ನುಗ್ಗೆಹಳ್ಳಿ, ರಾಜೇಶ್ವರಿ ಕೋಟೆಪ್ಪನವರ, ಶಾರದಾ ಮಲ್ಲಾಡದ ಮತ್ತಿತರರು ಇದ್ದರು.
ವಿಜೇತರ ವಿವರ...
ಶ್ರೀರಾಮನಗರದ ಭುವನೇಶ್ವರಿ ಗುತ್ತಲ, ಮೃತ್ಯುಂಜಯ ನಗರದ ನೀಲಮ್ಮ ಬೆಳಕೇರಿ, ರೋಟರಿ ಶಾಲೆ ಹತ್ತಿರದ ಭಾರತಿ ಜಂಬಗಿ, ಮೃತ್ಯುಂಜಯ ನಗರದ 6ನೇ ಕ್ರಾಸ್‌ನ ರಾಜೇಶ್ವರಿ, ತಾಲೂಕಿನ ಬೇಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಂಜುಳಾ ಮಕರಿ ಸೇರಿ ಐವರು ಮಹಿಳೆಯರು ಈ ಬಾರಿ ಸ್ಪರ್ಧೆಯ ಅದೃಷ್ಟಶಾಲಿಗಳಾಗಿದ್ದಾರೆ.