

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಒಟ್ಟು 9 ಬಾರಿ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ 3 ಬಾರಿ, ಪ್ರಧಾನಿಯಾಗಿ 6 ಬಾರಿ ಭೇಟಿ ನೀಡಿದ್ದಾರೆ.
9 ಬಾರಿ ಮೈಸೂರಿಗೆ ಭೇಟಿ: ನರೇಂದ್ರಮೋದಿ ಮುಖ್ಯಮಂತ್ರಿಂಾಗಿ 3 ಬಾರಿ ಮತ್ತು ಪ್ರಧಾನಿಯಾದ ನಂತರ 6 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. 2004ರ ಅಕ್ಟೋಬರ್‌ನಲ್ಲಿ ಪುರಭವನದಲ್ಲಿ ಆಂೋಜಿಸಿದ್ದ ಚುನಾವಣಾ ಪ್ರಚಾರ ಸಭೆಂುಲ್ಲಿ ಮೋದಿ ಪಾಲ್ಗೊಂಡಿ ದ್ದರು. ಮುಖ್ಯಮಂತ್ರಿ ಬಿ.ಎಸ್.ಂುಡಿಂುೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ 28 ಅಕ್ಟೋಬರ್ 2009 ರಂದು ಹಮ್ಮಿಕೊಂಡಿದ್ದ ದಸರಾ ಪಂಜಿನ ಕವಾಂುತು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಮರುದಿನ ನಂಜನಗೂಡು ತಾಲ್ಲೂಕಿನ ಸುತ್ತೂರು ಮಠದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ಭಾಗವಹಿಸಿ ಆಡಳಿತಕ್ಕೆ ಸಂಬಂಧಿಸಿದಂತೆ ಗೋಷ್ಠಿಯಲ್ಲಿ ಪಾಲ್ಗೊಂಡ್ದಿರು. 2014 ಏಪ್ರಿಲ್ 8ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಂುಲ್ಲಿ ಲೋಕಸಭಾ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ವಾತನಾಡಿದ್ದರು.
ಪ್ರಧಾನಿಯಾದ ನಂತರ 2016ರ ಜ.2ರಂದು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಆಶ್ರಮದ ನೂತನ ಎಸ್‌ಜಿಇಎಸ್ ಆಸ್ಪತ್ರೆ ಉದ್ಘಾಟನೆ, ಆ ನಂತರ ಸುತ್ತೂರು ಮಠದ ಶ್ರೀ ಶಿವರಾತ್ರಿರಾಜೇಂದ ್ರಶ್ರೀಗಳ ಜನ್ಮ ಶತವಾನೋತ್ಸವದಲ್ಲಿ ಭಾಗವಹಿಸಿ ಮರುದಿನ ಜ.3ರಂದು ಮೈಸೂರು ವಿಶ್ವವಿದ್ಯಾಲಂುದಲ್ಲಿ ಹಮ್ಮಿಕೊಂಡಿದ್ದ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ಗೆ ಚಾಲನೆ ನೀಡಿದ್ದರು.
2018ರ ೆಬ್ರವರಿ 18ರಂದು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿ ಮರುದಿನ 19ರಂದು ಮೈಸೂರು-ಬೆಂಗಳೂರು ನಡುವಿನ ದಶಪಥ, ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. 2022ರ ಜೂ.20ರಂದು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಅವರು 21 ರಂದು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಂೋಗ ದಿನಾಚರಣೆಂುಲ್ಲಿ ಭಾಗಿಂಾಗಿದ್ದರು. 8 ಏಪ್ರಿಲ್ 2023 ರಂದು ಮೈಸೂರಿಗೆ ಆಗಮಿಸಿ ಉಳಿದುಕೊಂಡಿದ್ದ ಅವರು ಮರುದಿನ ಬಂಡೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಏ.9 ರಂದು ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಹುಲಿ ಗಣತಿ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 30 ಏಪ್ರಿಲ್ 2023 ರಂದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ರೋಡ್ ಶೋ ನಡೆಸಿದ್ದರು. 7 ಮೇ 2023 ರಂದು ನಂಜನಗೂಡಿನ ಎಲಚಗೆರೆಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.