ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ

Narendra Modi is Prime Minister again
ವಿಜಯಪುರದ ಕೆಎಚ್​ಬಿ ಕಾಲನಿಯಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಅಭ್ಯರ್ಥಿ ರಮೇಶ ಜಿಗಜಿಣಗಿ, ಸುರೇಶ ಬಿರಾದಾರ, ಮಳುಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಕಳೆದ ಹತ್ತು ವರ್ಷಗಳ ಕೇಂದ್ರದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ರಹಿತ ಆಡಳಿತವು ಜನಮನ ಗೆದ್ದು, ಇಂದು ಮತ್ತೊಮ್ಮೆ ದೇಶಕ್ಕೆ ಮೋದಿ ಆಡಳಿತ ಬರಬೇಕೆಂಬುದು ಇಡೀ ದೇಶದ ಕೂಗಾಗಿದೆ. ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ನಗರದ ಕೆಎಚ್​ಬಿ ಕಾಲನಿಯಲ್ಲಿ ಪಾಲಿಕೆಯ ಐದು ವಾರ್ಡ್​ಗಳ ವ್ಯಾಪ್ತಿಯ ಪಂಡಿತ ದೀನ ದಯಾಳ ಉಪಾಧ್ಯಾಯ ಮಹಾಶಕ್ತಿ ಕೇಂದ್ರಗಳಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್​ನವರಿಗೆ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಇಲ್ಲ. ಮೋದಿ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅವರ ಬಾಯಿ ಕಟ್ಟಿ ಹಾಕಿದೆ.

ದೇಶದಲ್ಲಿ ಮೊದಲು 400 ವಿಶ್ವವಿದ್ಯಾಲಯಗಳಿದ್ದವು, ಆದರೆ ಕಳೆದ 10 ವರ್ಷಗಳಲ್ಲಿ 1100 ವಿವಿಗಳಾಗಿವೆ. 41 ವಂದೇ ಭಾರತ ರೈಲುಗಳು ಓಡುತ್ತಿವೆ. ಮೆಡಿಕಲ್​ ಕಾಲೇಜುಗಳ ಸಂಖ್ಯೆ 384 ರಿಂದ 700 ತಲುಪಿವೆ.

ದೇಶದಲ್ಲಿ 74 ಇದ್ದ ವಿಮಾನ ನಿಲ್ದಾಣಗಳು ಇಂದು ವಿಜಯಪುರ ಸೇರಿ 154 ವಿಮಾನ ನಿಲ್ದಾಣಗಳಾಗಿವೆ. ಹೀಗೆ ಹತ್ತು ಹಲವು ಅಪರಿಮಿತ ಅಭಿವೃದ್ಧಿ ಕೇಂದ್ರದ ಬಿಜೆಪಿ ಸರ್ಕಾರದ ಅಭಿವೃದ್ಧಿಗಳ ಪಟ್ಟಿ ವಿವರಿಸಿದರು.

ನಮ್ಮ ಲೋಕಸಭಾ ೇತ್ರದ ಬಿಜೆಪಿಯಲ್ಲಿ ಯಾವುದೇ ಒಡಕ್ಕಿಲ್ಲ. ದೇಶದ ರಣೆ, ಏಳ್ಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿ ಗೆಲುವಿಗೆ ರೂಪುರೇಷೆಗಳನ್ನು ಹಾಕಿದ್ದೇವೆ. ಜಿಲ್ಲೆಯ ಮತದಾರರು ಪ್ರಬುದ್ಧರಾಗಿದ್ದಾರೆ. ನಗರ ಮತೇತ್ರದಲ್ಲಿ ಬಿಜೆಪಿ 25 ಸಾವಿರ ಲೀಡ್​ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ವಿವೇಕಾನಂದ ಡಬ್ಬಿ, ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ನಗರ ಮಂಡಳ ಅಧ್ಯ ಶಂಕರ ಹೂಗಾರ, ಸುರೇಶ ಬಿರಾದಾರ, ಬಸವರಾಜ್​ ಬೈಚಬಾಳ, ಎಂ.ಎಸ್​. ಕರಡಿ, ಪ್ರೇಮಾನಂದ ಬಿರಾದಾರ, ಲಕ್ಷ್ಮೀ ಕನ್ನೊಳ್ಳಿ, ರಾಹುಲ್​ ಔರಂಗಬಾದ, ಮಹೇಶ ಒಡೆಯರ, ಸುನಿಲ ಜೈನಾಪುರ, ಪ್ರಭು ಕೆಂಗಾರ, ಪ್ರವಿಣ ಕೂಡ್ಗಿ, ಪಾಪುಸಿಂಗ ರಜಪೂತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net