ನರೇಂದ್ರ ಮೋದಿ ಪ್ರಬುದ್ಧ ಪ್ರಧಾನಿ..!

Narendra Modi is an enlightened Prime Minister..!
ಜಮಖಂಡಿ ನಗರದ ಬಸವಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು. ಬಿಜೆಪಿ ನಿಕಟಪೂರ್ವ ಕಾರ್ಯದರ್ಶಿ ಜಗದೀಶ ಹಿರೇಮನಿ, ಶಾಸಕ ನಾಡೋಜ ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಸಾಬು ದೊಡಮನಿ ಇತರರಿದ್ದರು.
Published on

ಜಮಖಂಡಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಪರಿವರ್ತನೆ ಮಾಡಿದ್ದಾರೆ. ಅವರು ಮತ್ತೆ ಪ್ರಧಾನಿಯಾದರೆ ದೇಶವನ್ನು ಆರ್ಥಿಕವಾಗಿ ನಂ.1 ಸ್ಥಾನಕ್ಕೆ ತರುತ್ತಾರೆ ಎಂದು ಬಿಜೆಪಿ ನಿಕಟಪೂರ್ವ ಕಾರ್ಯದರ್ಶಿ ಜಗದೀಶ ಹಿರೇಮನಿ ಹೇಳಿದರು.

ನಗರದ ಬಸವ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ,ನಮಗೆ ಪ್ರಬುದ್ಧ ಪ್ರಧಾನಮಂತ್ರಿ ಸಿಕ್ಕಿದ್ದಾರೆ. ದೇಶದ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿ ಬದುಕು ಸಾಧಿಸಬೇಕು. ಅದು ಪ್ರಧಾನಿಯವರ ಕಾರ್ಯವಾಗಿದೆ. ಸಂಸದ ಪಿ.ಸಿ. ಗದ್ದಿಗೌಡರ ಅವರನ್ನು 5ನೇ ಬಾರಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಎಲ್ಲರೂ ಕಾರ್ಯ ಮಾಡಬೇಕು. ಅವರ ಗೆಲುವು ಖಚಿತ ಎಂದು ಹೇಳಿದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಪಕ್ಷದ ಬೆನ್ನೆಲುಬು ಕಾರ್ಯಕರ್ತರು, ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅತಿ ಅವಶ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಕಾರ್ಯಗಳು ದೇಶದ ಪ್ರಗತಿಗೆ ಪೂರಕವಾಗಿವೆ. ನರೇಂದ್ರ ಮೋದಿ ವ್ಯಕ್ತಿಯಲ್ಲ, ಮಹಾನ್ ಶಕ್ತಿಯಾಗಿದ್ದಾರೆ. ಸಂಸದ ಗದ್ದಿಗೌಡರ ಅವರು ಪ್ರಚಾರಪ್ರಿಯರಲ್ಲ, ಅವರು ಮಾತಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆ ಎಂದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಇದು ದೇಶದ ಮಹಾ ಯುದ್ಧ ಧರ್ಮ, ಅಧರ್ಮ ನಡುವಿನ ಯುದ್ಧವಾಗಿದೆ. ಇದು ಗದ್ದಿಗೌಡರ ಚುನಾವಣೆಯಲ್ಲ, ನಮ್ಮ ಜೀವನದ ಚುನಾವಣೆಯಾಗಿದೆ. ಗದ್ದಿಗೌಡರ ಆಯ್ಕೆಯಾದರೆ ಕ್ಯಾಬಿನೆಟ್ ದರ್ಜೆ ಸಚಿವರಾಗುತ್ತಾರೆ ಎಂದರು.

ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಸಾಬು ದೊಡಮನಿ, ಪ್ರಕಾಶ ಕಾಳೆ, ಟಿ.ಎ. ಬಿರಾದಾರ, ಡಾ. ವಿಜಯಲಕ್ಷ್ಮೀ ತುಂಗಳ, ಡಾ.ಆರ್.ಎನ್. ಸೋನವಾಲ್ಕರ, ಬಸವರಾಜ ಬಿರಾದಾರ, ಪಿ.ಆರ್. ಪಾಲಬಾಂವಿ, ಶಿವಾನಂದ ಪಾಟೀಲ, ಏಗಪ್ಪ ಸವದಿ, ಯಮನೂರ ಮೂಲಂಗಿ, ಸುಪ್ರೀತಾ ಬೂತಡಾ ಇತರರಿದ್ದರು.

ಮಲ್ಲು ಹುಟಗಿ ವಂದೆ ಮಾತರಂ ಗೀತೆ ಹಾಡಿದರು. ಅರವಿಂದಗೌಡ ಪಾಟೀಲ ಸ್ವಾಗತಿಸಿದರು. ಮಲ್ಲು ದಾನಗೌಡ ನಿರೂಪಿಸಿದರು. ಅಜಯ ಕಡಪಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net