ತಾಕತ್ತಿನ ನಾಯಕತ್ವ ತೋರಿಸಿದ ನರೇಂದ್ರ ಮೋದಿ

nrp araga
ಎನ್.ಆರ್.ಪುರದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಹರೀಶ್ ಪೂಂಜ, ಡಿ.ಎನ್.ಜೀವರಾಜ್, ಸುಧಾಕರ್ ಎಸ್. ಶೆಟ್ಟಿ, ರಾಮಸ್ವಾಮಿ, ಅರುಣಕುಮಾರ್, ಚಂದ್ರಶೇಖರ್, ರಶ್ಮಿ ದಯಾನಂದ್, ಎಚ್.ಡಿ.ಲೋಕೇಶ್, ಪುಣ್ಯಪಾಲ್ ಇದ್ದರು.
Published on

ಎನ್.ಆರ್.ಪುರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಲ್ಲು ಹೊಡೆದವರಿಗೆ ಗುಂಡು ಹೊಡೆಯಿರಿ ಎಂದು ತಾಕತ್ತಿನ ನಾಯಕತ್ವ ಪ್ರದರ್ಶಿಸಿದರು ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಸೋಮವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, 2014ರಲ್ಲಿ ಕಾಂಗ್ರೆಸ್ ಖಾಲಿ ಚೊಂಬನ್ನು ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ಕಳೆದ 10 ವರ್ಷದಲ್ಲಿ ಖಾಲಿ ಚೊಂಬನ್ನು ನರೇಂದ್ರ ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ. ಏ.26ರಂದು ಮತದಾರರು ಕಾಂಗ್ರೆಸ್‌ಗೆ ಖಾಲಿ ಚೊಂಬು ನೀಡುತ್ತಾರೆ ಎಂದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜಾ ಮಾತನಾಡಿ, ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಸಭೆಯಲ್ಲಿ ನಮ್ಮ ದೇಶದ ಪ್ರಧಾನಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಈಗ ನರೇಂದ್ರ ಮೋದಿ ಎಲ್ಲರನ್ನೂ ಹಿಂದೆ ಹಾಕಿ ಮೊದಲನೇ ಕುರ್ಚಿಲ್ಲಿ ಕುಳಿತುಕೊಳ್ಳುತ್ತಾರೆ. ದೇಶದಲ್ಲಿ ರಾಮಮಂದಿರ ಕಟ್ಟಲಾಗಿದೆ. ಕಾಶಿ, ಉಜ್ಜಯನಿ ಸೇರಿದಂತೆ ಎಲ್ಲ ದೇವಸ್ಥಾನಗಳನ್ನು ಮರು ನಿರ್ಮಿಸಲು ಪ್ರಾರಂಭಿಸಲಾಗಿದೆ. ದತ್ತಪೀಠದ ವಿಚಾರದಲ್ಲಿ ಜಯಪ್ರಕಾಶ ಹೆಗ್ಡೆ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆೆ. ಬಿಜೆಪಿಯಲ್ಲಿ ಪ್ರಾಮಾಣಿಕ ಕಾರ್ಯಕರ್ತರು ಇದ್ದಾರೆ. ಚುನಾವಣೆ ದೇಶಕ್ಕಾಗಿ ನಡೆಯುತ್ತಿದೆ ಎಂದರು.
ವಿವಿಧ ಗ್ರಾಮಗಳಿಂದ ಬೈಕ್ ಜಾಥಾ ಮೂಲಕ ಬಸ್ತಿಮಠಕ್ಕೆ ಬಂದರು. ನಂತರ ಪಾದಯಾತ್ರೆ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ವೇದಿಕೆಗೆ ಆಗಮಿಸಿದರು.
ಬಿಜೆಪಿ ಮುಖಂಡ ರಾಮಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್,
ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ಮುಖಂಡರಾದ ಎಚ್.ಡಿ.ಲೋಕೇಶ, ಪುಣ್ಯಪಾಲ್, ಪರ್ವೀಜ್, ಶಿವದಾಸ್, ಬಿ.ಟಿ.ರವಿ, ಮಾಲತೇಶ್, ರೇಖಾ ಮಂಜುನಾಥ್, ಪ್ರೀತಂ, ಸವಿತಾ ರತ್ನಾಕರ, ಕೆಸವಿ ಮಂಜುನಾಥ್,ಎ.ಬಿ.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net