ನರೇಂದ್ರ ಮೋದಿ ಕೈ ಬಲಪಡಿಸಲು ಜನರು ಬಿಜೆಪಿ ಗೆಲ್ಲಿಸಬೇಕು

4
ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಮತಯಾಚಿಸಿದರು. ಸಂಪತಕುಮಾರ ಶೆಟ್ಟಿ, ರಾಜನ ಸೋಮಯ್ಯ, ವಿನಯ ಪಾಟೀಲ, ಗೀತಾ ತೋರಿ, ಶಿವು ಐಗಳಿ, ರೇಖಾ ಬಳೊಳ್ಳಿ ಇತರರು ಇದ್ದರು.
Published on

ಅಥಣಿ: ದೇಶದ ಸಮೃದ್ಧಿಗೆ ಮತ್ತೆ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಮಂತ್ರಿಯಾಗಬೇಕು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅತ್ಯಧಿಕ ಮತಗಳಿಂದ ಗೆಲ್ಲುವುದು ಖಚಿತ ಎಂದು ಬಿಜೆಪಿ ಯುವ ಮುಖಂಡ ಸಂಪತಕುಮಾರ ಶೆಟ್ಟಿ ಹೇಳಿದರು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಅಭ್ಯರ್ಥಿ ಪರ ಭಾನುವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡು ಮಾತನಾಡಿದ ಅವರು, ವಿಶ್ವನಾಯಕನಾಗಿರುವ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲು ಎಲ್ಲರೂ ಬಿಜೆಪಿಗೆ ಮತನೀಡಬೇಕು. ಇದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯವಿದೆ. ಮೋದಿ ಕೈ ಬಲಪಡಿಸಲು ಬಿಜೆಪಿಯನ್ನು ಗೆಲ್ಲಿಸಬೇಕೆಂದರು.

ಗಚ್ಚಿನಮಠಗಲ್ಲಿ, ಮೋಟಗಿಮಠ ಗಲ್ಲಿ, ಸಿದ್ದೇಶ್ವರ ರಸ್ತೆ, ಸಜ್ಜನಗಲ್ಲಿ, ಬುಧವಾರ ಪೇಟೆ, ಗೆಜ್ಜಿಗಲ್ಲಿ, ಕರಣಿ ಗಲ್ಲಿ ಸೇರಿ ಮತ್ತಿತರರ ವಾರ್ಡುಗಳಲ್ಲಿ ಮನೆ ಮನೆಗೆ ತೆರಳಿ ಮತ ನೀಡುವಂತೆ ವಿನಂತಿಸಿದರು.

ಕಾರ್ಯಕರ್ತರಾದ ವಿನಯ ಪಾಟೀಲ, ಗೀತಾ ತೋರಿ, ರಾಜನ ಸೋಮಯ್ಯ, ಶಿವು ಐಗಳಿ, ಮಹಾಂತೇಶ ಮಾಳಿ, ಜಯದೇವ ಯಲ್ಲಟ್ಟಿ, ಅಭಯ ಸಗರಿ, ಚಂದು ಸಂಕ, ಅಮೃತ ಮಹಾಜನ, ರೇಖಾ ಬಳೊಳ್ಳಿ, ಪ್ರಶಾಂತ ತೊಡಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net