ನರೇಗಲ್ಲ ಅನ್ನದಾನೇಶ್ವರ ಕಾಲೇಜ್​ಗೆ ಸಮಗ್ರ ವೀರಾಗ್ರಣಿ

12NRGL1 SPORTS
Published on

ನರೇಗಲ್ಲ: ಗಜೇಂದ್ರಗಡ ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2024-25ನೇ ಶೈಕ್ಷಣಿಕ ವರ್ಷದ ಗಜೇಂದ್ರಗಡ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನರೇಗಲ್ಲನ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜ್ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಗುಂಪು ಆಟಗಳಲ್ಲಿ ಬಾಲಕ ಮತ್ತು ಬಾಲಕಿಯರ ಎರಡು ವಿಭಾಗದಲ್ಲಿ ಕಬಡ್ಡಿ, ಖೋ ಖೋ, ಥ್ರೋಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್, ಟೆನ್ನಿಕಾಯಿಟ್, ಚೆಸ್, ಹ್ಯಾಂಡ್​ಬಾಲ್, ಟೆನಿಸ್ ಬಾಲ್, ಜಂಪ್-ರೋಪ್, ಕರಾಟೆ, ಯೋಗ, ಟ್ವೆಕಾಂಡೋ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜ್ ಕೀರ್ತಿ ಹೆಚ್ಚಿಸಿದ್ದಾರೆ.

ಬಾಲಕರ ವೈಯಕ್ತಿಕ ಆಟಗಳು:

ಹರೀಶ ಬಿ.ಎಚ್. 100 ಮೀ ಓಟದಲ್ಲಿ ಪ್ರಥಮ, ರಾಘವೇಂದ್ರ ಆಲೂರ 200 ಮೀ ಓಟದಲ್ಲಿ ತೃತೀಯ, ಪ್ರವೀಣ ಮ್ಯಾಗೇರಿ 800 ಮೀ. ಓಟದಲ್ಲಿ ಪ್ರಥಮ, ಶರಣಪ್ಪ ಗುಂಡೆ 1500 ಮೀ ಓಟದಲ್ಲಿ ಪ್ರಥಮ, ನೀಲಪ್ಪ 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ 4*100 ಮೀ ರಿಲೇ ಮತ್ತು 4*400 ಮೀ ರಿಲೆಯಲ್ಲಿ ಹರೀಶ ಬಿ.ಎಚ್. ತಂಡ ಪ್ರಥಮ, ಕಿರಣ ಕಡಗತ್ತಿ ಸೂರಜ ಕುರಿ, ಪರಶುರಾಮ ದಂಡಿನ ಕ್ರಾಸ್ ಕಂಟ್ರಿಯಲ್ಲಿ ಪ್ರಥಮ, ದಾಸಪ್ಪ ಮೂಲಿಮನಿ 110 ಮೀ. ಹರ್ಡಲ್ಸ್​ನಲ್ಲಿ ಪ್ರಥಮ, ಆದಿತ್ಯ ಹೊಸಳ್ಳಿ 110 ಮೀ. ಮತ್ತು 400 ಮೀ. ಹರ್ಡಲ್ಸ್​ನಲ್ಲಿ ದ್ವಿತೀಯ, ಪ್ರಜ್ವಲ್ ಪೂಜಾರ ಗುಂಡು ಎಸೆತ, ಹ್ಯಾಮರ್ ಥ್ರೋದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ, ಸಂತೋಷ ಜಲ್ಲಿಗೇರಿ ಹ್ಯಾಮರ್ ಥ್ರೋದಲ್ಲಿ ತೃತೀಯ, ಬಿ. ಸಾಗರ ಎತ್ತರ ಜಿಗಿತದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ತೃತೀಯ, ಸಂತೋಷ ಮಲ್ನಾಡದ ತ್ರಿವಿಧ ಜಿಗಿತದಲ್ಲಿ ಪ್ರಥಮ, ಭೀಮಪ್ಪ ತಲ್ಲೂರ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವೈಯಕ್ತಿಕ ಆಟಗಳು

ವಿಜಯಲಕ್ಷ್ಮೀ ಹಳ್ಳಿ 100 ಮೀ. ಓಟ, ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ಕಾವ್ಯಾ ಅಬ್ಬಿಗೇರಿ 200 ಮೀ. ಓಟದಲ್ಲಿ, 400 ಮೀ. ಓಟದಲ್ಲಿ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ, ಕಾವೇರಿ ಜಟ್ಟಿ ಕ್ರಾಸ್ ಕಂಟ್ರಿಯಲ್ಲಿ ಪ್ರಥಮ, 800 ಮೀ. ಓಟದಲ್ಲಿ ತೃತೀಯ, ಬಸಮ್ಮ ಕುರಿ 1500 ಮೀ. ಓಟದಲ್ಲಿ ಪ್ರಥಮ, 3000 ಮೀ. ಓಟದಲ್ಲಿ ತೃತೀಯ ಸ್ಥಾನ, 4*100 ಮೀ ರಿಲೆಯಲ್ಲಿ ಕಾವ್ಯಾ ಅಬ್ಬಿಗೇರಿ ತಂಡ ಪ್ರಥಮ ಸ್ಥಾನ, ಪವಿತ್ರಾ ತಳ್ಳಿಕೇರಿ 3 ಕಿ.ಮೀ ನಡಿಗೆಯಲ್ಲಿ ತೃತೀಯ ಸ್ಥಾನ, ಕ್ರಾಸ್ ಕಂಟ್ರಿಯಲ್ಲಿ ಪವಿತ್ರಾ ತಳ್ಳಿಕೇರಿ, ಸೃಷ್ಟಿ ನಿಡಗುಂದಿ ಪ್ರಥಮ ಸ್ಥಾನ, ಈರಮ್ಮ 100 ಮೀ. ಹರ್ಡಲ್ಸ್ ಮತ್ತು 400 ಮೀ. ಹರ್ಡಲ್ಸ್​ನಲ್ಲಿ ಪ್ರಥಮ, ಆಯಿಷಾ ಹ್ಯಾಮರ್ ಥ್ರೋದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ತೃತೀಯ, ಶಕುಂತಲಾ ಕಾಡಪ್ಪನವರ ಭಲ್ಲೆ ಎಸೆತದಲ್ಲಿ ದ್ವಿತೀಯ, ಸುಜಾತಾ ಹರಿಜನ, ಈರಮ್ಮ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಸ್ನೇಹಾ ಸಿದ್ದರಡ್ಡಿ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿದ್ಯಾರ್ಥಿನಿಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net