ಬೆಳ್ಳಿ ತೇರು ಎಳೆದು ಸಂಭ್ರಮಿಸಿದ ಸುಮಂಗಲೆಯರು

28-teru belli
Published on

ನರೇಗಲ್ಲ: ಹಾಲಕೆರೆಯ ಗುರು ಅನ್ನದಾನ ಸ್ವಾಮೀಜಿಗಳ 46ನೇ ಪುಣ್ಯಾರಾಧನೆ ನಿಮಿತ್ತ ಸೋಮವಾರ ಸಂಜೆ ಸುಮಂಗಲೆಯರು ಬೆಳ್ಳಿ ರಥವನ್ನು ಎಳೆದು ಸಂಭ್ರಮಿಸಿದರು.
ಬೆಳ್ಳಿ ರಥೋತ್ಸವಕ್ಕೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು. ಮಹಿಳೆಯರು ಆರತಿ, ಕುಂಭ ಮೇಳ, ಡೊಳ್ಳು ಕುಣಿತ, ಭಜನೆ, ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಭಕ್ತರು ಶ್ರೀ ಅನ್ನದಾನೇಶ್ವರ ಮಹಾರಾಜ್ ಕೀ ಜೈ, ಡಾ. ಅಭಿನವ ಅನ್ನದಾನೇಶ್ವರ ಮಹಾರಾಜ್ ಕೀ ಜೈ ಘೋಷಣೆ ಕೂಗಿದರು. ಸಹಸ್ರಾರು ಮಹಿಳೆಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಣಕವಾಡ ಅನ್ನದಾನೇಶ್ವರ ದೇವಮಂದಿರ ಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಖೇಳಗಿ ಶಿವಲಿಂಗೇಶ್ವರ ಮಠದ ಶಿವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಶಿವಾಚಾರ್ಯ ಸ್ವಾಮೀಜಿ, ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಅಡವಿಅಮರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ, ವಿರಕ್ತಮಠದ ಪರ್ವತ ದೇವರು, ಮರಿಕೊಟ್ಟೂರ ದೇವರು, ಶ್ರೀ ಸಿದ್ಧಲಿಂಗ ದೇವರು, ಬೂದಗುಂಪ ಸಿದ್ಧೇಶ್ವರ ದೇವರು, ವಿಶ್ವೇಶ್ವರ ದೇವರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net