ನಿವೃತ್ತ ನೌಕರರ ಸಂಘಕ್ಕೆ ನಿವೇಶನ ನೀಡಲು ಒತ್ತಾಯ

9-nrgl- manavi
Published on

ನರೇಗಲ್ಲ: ನರೇಗಲ್ಲ ಪಟ್ಟಣದಲ್ಲಿ ಬಹಳ ವರ್ಷಗಳಿಂದ ಹಿರಿಯರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಿವೃತ್ತ ನೌಕರರ ಸಂಘಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಸಭೆ, ಸಮಾರಂಭ ಮಾಡಲು ಸೂಕ್ತ ಜಾಗವಿಲ್ಲ. ಆದ್ದರಿಂದ ಪಪಂನಿಂದ ಸಂಘಕ್ಕೆ ಒಂದು ನಿವೇಶನ ಅಥವಾ ಕಟ್ಟಡ ನೀಡಬೇಕು ಎಂದು ಆಗ್ರಹಿಸಿ ಎರಡೂ ಸಂಘಗಳ ಸದಸ್ಯರು ಸೋಮವಾರ ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ. ಎ. ಅರವಟಗಿಮಠ ಮಾತನಾಡಿ, ನಮ್ಮ ಸಂಘವು ಅಸ್ತಿತ್ವಕ್ಕೆ ಬಂದು ಈಗಾಗಲೇ 10 ವರ್ಷಗಳಾದವು. ಕಳೆದ ಐದಾರು ವರ್ಷಗಳ ಹಿಂದೆಯೇ ನಾವು ನಿವೇಶನ ಅಥವಾ ಕಟ್ಟಡಕ್ಕಾಗಿ ಮನವಿ ನೀಡಿದ್ದೇವೆ. ಆದರೆ, ಈವರೆಗೂ ಪಟ್ಟಣ ಪಂಚಾಯಿತಿ ಸ್ಪಂದಿಸಿಲ್ಲ. ಆದ್ದರಿಂದ, ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿವೇಶನ ಅಥವಾ ಕಟ್ಟಡ ನೀಡಲು ಮುಂದಾಗಬೇಕು ಎಂದರು.ಹಿರಿಯ ನಾಗರಿಕರ ಸಂಘದ ಅಧ್ಯಕ್ಷ, ವಕೀಲ ವೀರಣ್ಣ ದಿಂಡೂರ ಮಾತನಾಡಿ, ಹಿರಿಯ ನಾಗರಿಕರಿಗೆ ಬೇಕಾದ ಸೌಲಭ್ಯಗಳನ್ನು ಸ್ಥಳೀಯ ಪಟ್ಟಣ ಪಂಚಾಯತಿ ಒದಗಿಸಬೇಕೆಂಬುದು ಕೇಂದ್ರ ಸರ್ಕಾರದ ನಿರ್ಧಾರವಾಗಿದೆ. ಆ ನಿರ್ಧಾರವನ್ನು ಇಲ್ಲಿ ಜಾರಿಗೊಳಿಸಿ ನಮಗೆ ಅನುಕೂಲ ಮಾಡಿಕೊಡಿ. ನಮಗೊಂದು ಜಾಗ ನೀಡಿದರೆ ನಮ್ಮ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ ಎಂದರು.

ಮನವಿ ಸ್ವೀಕರಿಸಿದ ಅಧ್ಯಕ್ಷ ಫಕೀರಪ್ಪ ಮಳ್ಳಿ ಮಾತನಾಡಿ, ಈ ಹಿಂದೆ ನೀವು ನೀಡಿರುವ ಮನವಿಯ ಬಗ್ಗೆ ನಾನು ಸಿಬ್ಬಂದಿ ಬಳಿ ವಿಚಾರಿಸುತ್ತೇನೆ. ನೀವು ಮನವಿ ನೀಡಿದ ಸಂದರ್ಭದಲ್ಲಿ ನಾನು ಅಧಿಕಾರದಲ್ಲಿದ್ದಿಲ್ಲ. ಈಗ ನನ್ನ ಬಳಿ ನೀವು ಮನವಿ ನೀಡಿರುವುದರಿಂದ ಇದನ್ನು ಪರಿಶೀಲಿಸಿ ಆದಷ್ಟು ಬೇಗ ಜಾಗದ ವ್ಯವಸ್ಥೆ ಮಾಡುತ್ತೇನೆ ಎಂದರು.

ಡಾ. ಆರ್.ಕೆ. ಗಚ್ಚಿನಮಠ, ವೀರಭದ್ರಪ್ಪ ಕೆರಿಯವರ, ಶಿವಯೋಗಿ ಜಕ್ಕಲಿ, ಎಂ.ಎಸ್. ದಢೇಸೂರಮಠ, ಸುರೇಶ ಬಾಗಲಿ, ಶಿವಯೋಗಿ ಜಕ್ಕಲಿ, ಕಾಶಪ್ಪ ಸಂಗನಾಳ, ಎಸ್.ಎಚ್. ಕುಲಕರ್ಣಿ, ಅಶೋಕ ಬೇವಿನಕಟ್ಟಿ, ರಾಚಯ್ಯ ಮಠದ, ಸುರೇಶ ಬಾಗಲಿ, ಗುರುಪಾದಪ್ಪ ಬೆಲ್ಲದ, ಕಾಶಪ್ಪ ಸಂಗನಾಳ, ಅರುಣ ಕುಲಕರ್ಣಿ, ಎ.ಎಸ್. ಮಲಕಸಮುದ್ರಮಠ, ಎಸ್.ಕೆ. ಪಾಟೀಲ, ಎಚ್.ವೈ. ಮಣ್ಣೊಡ್ಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net