

ಅಬ್ಬಿಗೇರಿ: ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ನಿಮಿತ್ತ ವಿಜಯದಶಮಿಯಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಗ್ರಾಮದ ಹಳೇ ಹಿರೇಮಠದಿಂದ ನರೇಗಲ್ ರಸ್ತೆಯ ಹೊಸ ಮಠದವರೆಗೆ ಕುಂಭ ಹೊತ್ತು ಉದ್ರೋದಕವನ್ನು ತೆಗೆದುಕೊಂಡು ಸಾಗಿದರು.
ಬೆಳಗ್ಗೆ ಹಳೇಮಠದಿಂದ ಪ್ರಾರಂಭವಾದ ಕುಂಭ ಮೆರವಣಿಗೆಯು ಗ್ರಾಮ ಪಂಚಾಯಿತಿ, ಬಸವಣ್ಣದೇವರ ದೇವಸ್ಥಾನ, ಅಗಸಿ, ಗಾಂಧಿ ವೃತ್ತ, ದುರ್ಗಾದೇವಿ ದೇವಸ್ಥಾನ, ಅನ್ನದಾನೇಶ್ವರ ಪ್ರೌಢಶಾಲೆ ಮೂಲಕ ಹೊಸ ಮಠಕ್ಕೆ ತಲುಪಿತು. ಮೆರವಣಿಗೆಯಿಲ್ಲಿ ಜಗದ್ಗುರುಗಳೊಂದಿಗೆ ಸಾವಿರಾರು ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.