

ನರೇಗಲ್ಲ: ಪಟ್ಟಣಕ್ಕೆ ಭಾನುವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ, ಶಶಿಕಲಾ ಪಾಟೀಲ ದಂಪತಿ ಪೂಜೆ ಸಲ್ಲಿಸಿ, ಸ್ವಾಗತಿಸಿದರು.
ಸಾಹಿತಿ ಮೃತ್ಯುಂಜಯ ಧಡೇಸೂರಮಠ ಮಾತನಾಡಿ, ನೂರಾರು ವರ್ಷಗಳ ಹಿಂದೆ ನಮ್ಮ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು ಎಂದು ಅಮೋಘ ವರ್ಷ ನೃಪತುಂಗ ತಮ್ಮ ಕಾವ್ಯಗಳಲ್ಲಿ ಬರೆದಿದ್ದಾರೆ. ಅಲ್ಲದೆ, ರಾಜ ಇಮ್ಮಡಿ ಪುಲಿಕೇಶಿಯವರ ಅವಧಿಯಲ್ಲಿ ನರ್ಮದಾ ನದಿವರೆಗೂ ಹಬ್ಬಿತ್ತು ಎನ್ನಲಾಗಿದೆ. ಹೀಗೆ ನಮ್ಮ ರಾಜ್ಯಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ ಎಂದರು.
ಮಿಥುನ ಪಾಟೀಲ ಮಾತನಾಡಿ, ಕನ್ನಡ ಭಾಷೆ ತನ್ನದೇಯಾದ ಹಿರಿಮೆ ಹೊಂದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನ್ನಡಕ್ಕಿರುವ ಅಗಾಧ ಶಕ್ತಿ ಮತ್ತೊಂದು ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕೆ.ಎಸ್. ಕಳಕಣ್ಣವರ, ಎಂ.ವಿ. ವೀರಾಪೂರ, ಅರುಣ ಕುಲಕರ್ಣಿ, ಡಿ.ಎ. ಅರವಟಗಿಮಠ, ಬಿ.ಬಿ. ಕುರಿ, ಜೆ.ಎ. ಪಾಟೀಲ, ಹನಮಂತ ಅಬ್ಬಿಗೇರಿ, ಹುಲಗಪ್ಪ ಬಂಡಿವಡ್ಡರ, ಭಾರತಿ ಶಿರ್ಸಿ, ಮಹಾದೇವಪ್ಪ ಬೇವಿನಕಟ್ಟಿ, ಕೆ.ಸಿ. ಜೋಗಿ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಫಕೀರಪ್ಪ ಬಂಬ್ಲಾಪೂರ, ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಶ್ರೀಶೈಲಪ್ಪ ಬಂಡಿಹಾಳ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ವಿವಿಧ ಶಾಲೆಗಳ ಮಕ್ಕಳು, ಕಸಾಪ, ಬೀಚೀ ಬಳಗ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಕನ್ನಡ ಪರ ಸಂಘಟನೆಗಳ ಸದಸ್ಯರು, ಶಿಕ್ಷಕರು, ಅಂಗನವಾಡಿ ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.