ಲಿಂಗಾಯತರೆಲ್ಲ ಒಂದೇ ಎಂಬ ಭಾವವಿರಲಿ

23-NAREGAL BOOK
Published on

ನರೇಗಲ್ಲ: ಲಿಂಗಾಯತರೆಲ್ಲರೂ ಒಂದೇ ಎಂಬ ಭಾವ ನಮ್ಮಲ್ಲಿ ಮೂಡಬೇಕು. ನಮ್ಮಲ್ಲಿ ಒಳಪಂಗಡಗಳು ಎಷ್ಟೇ ಇರಲಿ, ಅವುಗಳನ್ನೇ ದೊಡ್ಡದು ಮಾಡಿ ಸಮಯ ಕಳೆಯುವುದರ ಬದಲು ಎಲ್ಲರೂ ಒಂದಾಗಿ ಬದುಕು ಸಾಗಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಹಾಲಕೆರೆ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ದಿ. ಎಸ್.ವಿ. ನೇಗಲಿ ಅವರ 84ನೇ ಜಯಂತ್ಯುತ್ಸವ, ‘ಸಾಧನೆಯ ಸಿರಿ’ ಅಭಿವಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ನೇಗಲಿ ಗುರುಗಳ ಶ್ರಮ ಅಪಾರವಾದುದು. ಸಮಾಜ ಸಂಘಟನೆಗೆ ಆದ್ಯತೆ ನೀಡಿದ್ದ ಗುರುಗಳ ಶ್ರಮ ಸಾರ್ಥಕವೆನಿಸಿದೆ ಎಂದರು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜ ದಿಂಡೂರ, ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ, ಬಿ.ಎಸ್. ಶಿರೋಳ, ಪಂಚಮಸಾಲಿ ಸಂಘದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಸೋಮಣ್ಣ ಡಾಣಗಲ್ಲ, ವಸಂತಾ ಹುಲ್ಲತ್ತಿ, ರಾಜ್ಯ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಜಿ.ಪಿ. ಪಾಟೀಲ, ಉಪನ್ಯಾಸಕಿ ಶಕುಂತಲಾ ಸಿಂಧೂರ, ಎಸ್.ಎಚ್. ಪಾಟೀಲ, ಭಾವಿ ಬೆಟ್ಟಪ್ಪ, ಶಿವಗಂಗವ್ವ ನೇಗಲಿ, ಪ್ರಕಾಶ ಪಾಟೀಲ, ಚಂದ್ರಶೇಖರ ದಿಂಡೂರ, ಎಸ್.ಎಸ್. ಪಾಟೀಲ, ಕಳಕನಗೌಡ, ಆರ್.ಜಿ. ಚಿಕ್ಕಮಠ ಇದ್ದರು. ಸಂಗಣ್ಣ ಗದ್ದಿ, ಮುತ್ತಣ್ಣ ನೇಗಲಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net