ನರೇಗಾದಡಿ 268 ಕಾಮಗಾರಿ

Oplus_131072
Oplus_131072
Published on

ಯಳಂದೂರು : ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2023-24 ನೇ ಸಾಲಿನಲ್ಲಿ 268 ಕಾಮಗಾರಿಗಳು ನಡೆದಿವೆ ಎಂದು ಅಂಬಳೆ ಗ್ರಾಪಂ ಪಿಡಿಒ ಸಿ.ಎನ್. ಕಾವ್ಯಾ ಮಾಹಿತಿ ನೀಡಿದರು.

ಅಂಬಳೆ ಗ್ರಾಪಂ ಕಚೇರಿಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2023-24 ನೇ ಸಾಲಿನ ನರೇಗಾ ಕಾಮಗಾರಿಗಳ ಸಾಮಾಜಿಕ ಲೆಕ್ಕ ತಪಾಸಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಪಂ ವತಿಯಿಂದ 59 ಸಮುದಾಯ ಕಾಮಗಾರಿಗಳು ನಡೆದಿದ್ದು, ಒಟ್ಟು 77.46 ಲಕ್ಷ ರೂ. ಪಾವತಿ ಮಾಡಲಾಗಿದೆ. ಒಟ್ಟು 199 ವೈಯಕ್ತಿಕ ಕಾಮಗಾರಿ ನಡೆದಿದ್ದು, ಇದಕ್ಕೆ 15.88 ಲಕ್ಷ ರೂ. ಪಾವತಿ ಮಾಡಲಾಗಿದೆ. ಇದರೊಂದಿಗೆ ತೋಟಗಾರಿಕಾ ಇಲಾಖೆ ವತಿಯಿಂದ 10 ವೈಯಕ್ತಿಕ ಕಾಮಗಾರಿಗಳು ನಡೆದಿವೆ. 1.57 ಲಕ್ಷ ರೂ. ಪಾವತಿ ಮಾಡಲಾಗಿದೆ. ಗ್ರಾಪಂನ 258 ಕಾಮಗಾರಿಗಳಿಂದ 93.35 ಲಕ್ಷ ರೂ. ಹಾಗೂ ತೋಟಗಾರಿಕಾ ಇಲಾಖೆಯ 10 ಕಾಮಗಾರಿಗಳಿಂದ 1.57 ಲಕ್ಷ ರೂ. ಪಾವತಿ ಮಾಡಲಾಗಿದ್ದು, ಒಟ್ಟು 268 ಕಾಮಗಾರಿಗಳಿಂದ 94.92 ಲಕ್ಷ ರೂ.ಗಳ ಮೊತ್ತದ ಕೆಲಸಗಳು ನಡೆದಿವೆ ಎಂದು ಮಾಹಿತಿ ನೀಡಿದರು.

ಸಮುದಾಯ ಭವನ ಕಾಮಗಾರಿ ನಡೆದಿಲ್ಲ:

ಅಂಬಳೆ ಗ್ರಾಪಂ ವ್ಯಾಪ್ತಿಯಲ್ಲಿರುವ ವೈ.ಕೆ.ಮೋಳೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯದ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಪಂಚಾಯಿತಿಯಿಂದ ಮಹಜರು ನಡೆಸಲಾಗಿದೆ ಎಂದು ಸಿ.ಎನ್.ಕಾವ್ಯಾ ಸಭೆಗೆ ತಿಳಿಸಿದರು. ನರೇಗಾ ಕಾಮಗಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಅನೇಕ ಅವಕಾಶಗಳಿವೆ. ಜಾಬ್ ಕಾರ್ಡ್ ಹೊಂದಿರುವವರು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕೆಲಸಕ್ಕೆ ಬೇಡಿಕೆ ಇಟ್ಟರೆ ಅಂತಹವರಿಗೆ ಕೆಲಸಗಳನ್ನು ನೀಡಲಾಗುವುದು. ನಮ್ಮ ಹೊಲ, ನಮ್ಮ ದಾರಿ, ಕಲ್ ಪಿಚಿಂಗ್, ರಿವಿಟ್‌ಮೆಂಟ್ ಸೇರಿದಂತೆ ಅನೇಕ ಕಾಮಗಾರಿಗಳು ಮಾಡಲು ಅವಕಾಶವಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ, ಉಪಾಧ್ಯಕ್ಷೆ ಮಹಾದೇವಮ್ಮ, ಸದಸ್ಯರಾದ ಸಿದ್ದನಾಯಕ, ಮಹದೇವಸ್ವಾಮಿ, ಕಾರ್ಯದರ್ಶಿ ಪುಟ್ಟರಾಜು, ತೋಟಗಾರಿಕಾ ಇಲಾಖೆಯ ಶಿವರಂಜನಿ, ಜಲ್‌ಜೀವನ್ ಮಿಷನ್‌ನ ಜೆಇ ಅನುಶ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net