ಕೂಲಿಕಾರರ ಊರಲ್ಲೇ ಉದ್ಯೋಗ `ಖಾತ್ರಿ'

6 Dwd 3
Published on

ಧಾರವಾಡ: ಬರಗಾಲದ ಸಂದರ್ಭದಲ್ಲಿ ಕೂಲಿ ಕೇಳಿ ಬರುವ ಎಲ್ಲರಿಗೂ ಅವರ ಊರಲ್ಲಿ ಉದ್ಯೋಗ ನೀಡಲಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ. ೯೦ರಷ್ಟು ಗುರಿ ಸಾಽಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಿ ಅಽಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಲ್ಲಿ ನರೇಗಾ ಅಡಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿದ ನಂತರ ಮಾದನಭಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನರೇಗಾ ಅಡಿ ಕೃಷಿ ಹೊಂಡ, ಬದು ನಿಮÁðಣ, ಕುರಿದೊಡ್ಡಿ, ದನದ ಕೊಟ್ಟಿಗೆ, ಇಂಗುಗು0ಡಿ, ತೋಟಗಾರಿಕೆ ಬೆಳೆ ವಿಸ್ತರಣೆ, ಪೌಷ್ಠಿಕ ತೋಟ, ಎರೆಹುಳು ಗೊಬ್ಬರ ಘಟಕ ವೈಯಕ್ತಿಕ ಕಾಮಗಾರಿಗಳಾಗಿವೆ. ಸಮಗ್ರ ಕೆರೆ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಸಾರ್ವಜನಿಕ ನಾಲಾ ಹೊಳೆತ್ತುವುದು. ಶಾಲಾ ಕಾಂಪೌAಡ್, ಶಾಲೆಯ ಆಟದ ಮೈದಾನ, ಸಂಪರ್ಕ ರಸ್ತೆ ಮತ್ತು ಗ್ರಾಮೀಣ ಸಂತೆ ಕಟ್ಟೆ ನಿಮÁðಣದಂಥ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಮಾತನಾಡಿ, ಪ್ರಸಕ್ತ ವರ್ಷದ ಕ್ರಿಯಾಯೋಜನೆಯಲ್ಲಿ ೩೨೮ ಕೆರೆಗಳನ್ನು ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದರು.
ನAತರ ಅಽಕಾರಿಗಳ ತಂಡ ದುಬ್ಬನಮರಡಿ ಗ್ರಾಮದ ರಾಘವೇಂದ್ರ ಕ್ಯಾಸನೂರ ಮತ್ತು ಅರವಿಂದ ಚವ್ಹಾಣ ಅವರ ಜಮೀನಿನಲ್ಲಿ ಬೆಳೆದ ಡ್ರ‍್ಯಾಗನ್ -ÀÇ್ರಟ್ ಬೆಳೆ, ಮÁದನಭಾವಿ ಗ್ರಾಮದ ದಯಾನಂದ ಹೊಳೆಹಡಗಲಿ ಅವರ ಪಪ್ಪಾಯಿ ತೋಟ, ಮಾದನಭಾವಿ ಗ್ರಾಮ ಪಂಚಾಯಿತಿಯಲ್ಲಿ ಆರಂಭಿಸಲಾದ ಕೂಸಿನ ಮನೆ, ಘನತ್ಯಾಜ್ಯ ವಿಲೇವಾರಿ ಘಟಕ, ಗ್ರಾಮದ ಹುಚ್ಚಪ್ಪಜ್ಜನ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಽಕಾರಿ ದೀಪಕ ಮಡಿವಾಳರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಇಮ್ತಿಯಾಜ್, ಮಾದನಬಾವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಽಕಾರಿ ಶೇಖಪ್ಪ ಬೆಟದೂರ, ಡ್ರ‍್ಯಾಗನ್ -ÀÇ್ರಟ್ ಬೆಳೆದ ರೈತರಾದ ರಘುನಾಥ ಕ್ಯಾಸನೂರ ಮತ್ತು ಅರವಿಂದ ಚವ್ಹಾಣ, ಪಪ್ಪಾಯಿ ಬೆಳೆಗಾರರಾದ ದಯÁನಂದ ಹೊಳೆಹಡಗಲಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ಸುಭಾಷ ಸಂಪಗಾವಿ, ಸಹಾಯಕ ನಿರ್ದೇಶಕರಾದ ಗಿರೀಶ ಕೋರಿ, ಚಂದ್ರು ಪೂಜಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net