

ಸಿರಗುಪ್ಪ: ತಾಲೂಕಿನ 64-ಹಳೇಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಲ್ಯಾಣಿ ಪುನಶ್ಚೇತನ ಮತ್ತು ಸಿಸಿ ರಸ್ತೆ ಕಾಮಗಾರಿಗಳನ್ನು ಜಿಪಂ ಸಿಇಒ ರಾಹುಲ್ ಸುಂಕನೂರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ 64-ಹಳೇಕೋಟೆ ಗ್ರಾಪಂನ ಹಳೇಕೋಟೆ ಗ್ರಾಮದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಕುಡಿವ ನೀರಿನ ಬಾವಿ (ಸೇದಬಾವಿ) ಸುತ್ತಲೂ ಗೋಡೆ ನಿರ್ಮಾಣ ಕಾಮಗಾರಿ ಹಾಗೂ ಒಂದನೇ ವಾರ್ಡ್‌ನಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸಿಸಿ ರಸ್ತೆಯನ್ನು ವೀಕ್ಷಿಸಿದರು.
ನರೇಗಾ ಎಡಿ ಮನೋಹರ, ಎಡಿಪಿಸಿ ಎಚ್.ಎನ್.ಅಂಬರೀಷ್, ಪಿಡಿಒ ರಾಜೇಶ್ವರಿ, ತಾಂತ್ರಿಕ ಸಹಾಯಕ ವೀರೇಶ ಇತರರಿದ್ದರು.