ನರೇಗಾ ಸದುಪಯೋಗವಾಗಲಿ

21GKK1
ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನಕ್ಕೆ ಚಾಲನೆ ನೀಡಿದರು. ತಾಪಂ ವ್ಯವಸ್ಥಾಪಕ ಈರಪ್ಪ ಹೊಸಮನಿ, ಸಹಾಯಕ ಲೆಕ್ಕಾಧಿಕಾರಿ ಲಕ್ಷ್ಮೀ ಬಂಡಾರಿ, ಜ್ಯೋತಿ ಜವಳಿ, ರಾಹುಲ ಚೌಗಲಾ, ಶಂಕರ ಗುಜನಟ್ಟಿ ಇತರರಿದ್ದರು.
Published on

ಗೋಕಾಕ: ರಾಜ್ಯಾದ್ಯಂತ ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ಸಿದ್ದಪಡಿಸುವ ಸಲುವಾಗಿ ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಹೇಳಿದರು.

ನಗರದ ತಾಪಂ ಆವರಣದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಮನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಒಳಗೊಂಡ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ರೈತರು ಅವಶ್ಯಕ ಕಾಮಗಾರಿಗಳ ಬೇಡಿಕೆ ಸಲ್ಲಿಸಬೇಕು. ನರೇಗಾದಡಿ ಉದ್ಯೋಗ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ವಾರ್ಷಿಕ 100 ದಿನಗಳ ಉದ್ಯೋಗ ನೀಡಲಾಗುವುದು. ರೈತರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯನ್ನು ಪಂಚಾಯಿತಿಗೆ ಸಲ್ಲಿಸಬಹುದು. ಉದ್ಯೋಗ ವಾಹಿನಿ ರಥವು ತಾಲೂಕಿನ 33 ಗ್ರಾಪಂಗಳಲ್ಲಿ ಸಂಚರಿಸಲಿದೆ ಎಂದರು.

ನರೇಗಾ ಸಹಾಯಕ ನಿರ್ದೇಶಕ ವಿನಯಕುಮಾರ ಎಸ್., ಮಾತನಾಡಿ, ನರೇಗಾ ಯೋಜನೆಯಲ್ಲಿ ತಾಲೂಕಿನ ನರೇಗಾ ಕಾಯಕ ಬಂಧುಗಳು ಹಾಗೂ ಕೂಲಿಕಾರರು ಬೇಡಿಕೆಗಳನ್ನು ಕ್ಯೂ-ಆರ್ ಕೋಡ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ತಾಪಂ ವ್ಯವಸ್ಥಾಪಕ ಈರಪ್ಪ ಹೊಸಮನಿ, ಸಹಾಯಕ ಲೆಕ್ಕಾಧಿಕಾರಿ ಲಕ್ಷ್ಮೀ ಬಂಡಾರಿ, ತಾಪಂ ತಾಂತ್ರಿಕ ಸಂಯೋಜಕ ಶಬ್ಬಿರ ಗಡ್ಡೇಕರ, ಐಇಸಿ ಸಂಯೋಜಕ ಶಂಕರ ಗುಜನಟ್ಟಿ, ಎಂಐಎಸ್ ಸಂಯೋಜಕ ರಾಹುಲ ಚೌಗಲಾ, ಆಡಳಿತ ಸಹಾಯಕಿ ಜ್ಯೋತಿ ಜವಳಿ, ತಾಪಂ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net