ನರೇಗಾದಲ್ಲಿ ಪುರುಷ, ಸ್ತ್ರೀಯರಿಗೆ ಸಮಾನ ಕೂಲಿ

Madluru Mahila Kayakotsava campaign
ಯಲಬುರ್ಗಾ ತಾಲೂಕಿನ ಮದ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ ಚಾಲನೆ ನೀಡಿದರು.
Published on

ಯಲಬುರ್ಗಾ: ನರೇಗಾ ಕೆಲಸದಲ್ಲಿ ಸ್ತ್ರೀಯರನ್ನು ಹೆಚ್ಚು ತೊಡಗಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಮಹಿಳಾ ಕಾಯಕೋತ್ಸವ ಅಭಿಯಾನದ ಉದ್ದೇಶ ಎಂದು ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ ಹೇಳಿದರು.

ತಾಲೂಕಿನ ಗೆದಗೇರಿ ಗ್ರಾಪಂ ವ್ಯಾಪ್ತಿಯ ಮದ್ಲೂರು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಯಡಿ ಮಹಿಳೆ, ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ನರೇಗಾದಡಿ ಗ್ರಾಮದಲ್ಲಿರುವ ಕೆರೆ, ನಾಲೆ, ಕೃಷಿಹೊಂಡ, ಬದು ನಿರ್ಮಾಣ ಮಾಡಿಕೊಳ್ಳಬಹುದು. ಇದರಿಂದ ಮಣ್ಣಿನ ಸವಕಳಿ ತಡೆಗಟ್ಟಿ , ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದರು.

ಗ್ರಾಪಂ ಸದಸ್ಯ ಯಮನಗೌಡ, ತಾಪಂ ತಾಂತ್ರಿಕ ಸಹಾಯಕ ಸಂತೋಷ ನಂದಾಪುರ, ಪಿಡಿಒ ಶಿವರಾಜ ನಿಡಶೇಸಿ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕಿ ಶ್ರೀದೇವಿ, ಕರವಸೂಲಿಗಾರ ಕಳಕಯ್ಯ ಹಿರೇಮಠ, ಗ್ರಾಮ ಕಾಯಕ ಮಿತ್ರರಾದ ಮಂಜುಳಾ ತಳವಾರ, ಕಾಯಕ ಬಂಧುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net