ಲಕ್ಷಾಂತರ ಜನರಿಗೆ ನರೇಗಾ ದಾರಿ ದೀಪ, ನರೇಗಾ ನೌಕರರ ಕ್ರೀಡೋತ್ಸವ ಆರಂಭ

IMG-20221008-WA0064444
Published on

ಚಿತ್ರದುರ್ಗ: ನರೇಗಾ ಯೋಜನೆ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ ಎಂದು ಜಿಪಂ ಉಪ ಕಾರ‌್ಯದರ್ಶಿ,ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ರಂಗಸ್ವಾಮಿ ಹೇಳಿದರು.

ರಾಜ್ಯಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಜಿಲ್ಲಾಮಟ್ಟದ ನರೇಗಾ ನೌಕರರ ಕ್ರೀಡೋತ್ಸವ-2022ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ನೂರಾರು ಯುವಕರು ಈ ಯೋಜನೆಯಿಂದ ಉದ್ಯೋಗ ಪಡೆದಿದ್ದಾರೆ.

ನಿತ್ಯದ ಕೆಲಸದ ಒತ್ತಡದ ಜಂಜಾಟದಿಂದ ಮುಕ್ತರಾಗಲು ಕ್ರೀಡೆ ಸಹಕಾರಿಯಾಗಿದೆ. ಉತ್ತಮ ಆರೋಗ್ಯ,ಮಾನಸಿಕ ಆರೋಗ್ಯಕ್ಕಾಗಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕಿದೆ ಎಂದರು.

ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಮಾತನಾಡಿ,ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಮಂಜುನಾಥ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಇವರು ಮಾತನಾಡಿ,ನರೇಗಾ ಯೋಜನೆಗೆ ಸರ್ಕಾರ ಸಾವಿರಾರು ಕೋಟಿ ರೂ.ಅನುದಾನ ಮೀಸಲಿಟ್ಟಿದೆ.

ಇದರ ಲಾಭವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ತಮ್ಮಗಳ ಮೇಲಿದೆ. ಯಾವುದೇ ಕಾರಣಕ್ಕೂ ಒತ್ತಡಳಿಗೆ ಮಣಿಯದೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ, ಆ ಮೂಲಕ ಯೋಜನೆಯ ಮೂಲಉದ್ದೇಶವನ್ನು ಈಡೇರಿಸಿ.

ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರ ಬೇಕೆಂದು ನೌಕರರಿಗೆ ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ರವಿಕುಮಾರ್ ಮಾತನಾಡಿದರು. ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ,ಮೋಹನ್‌ಕುಮಾರ,ಪ್ರತಾಪ್,ವೀರೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net