

ಬೆಳಗಾವಿ: ಜಿಲ್ಲೆಯಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿರುವ ನೀರಾವರಿ ಕಾಲುವೆಗಳಿಗೆ ನರೇಗಾ ಯೋಜನೆ ಕಾಯಕಲ್ಪ ಕಲ್ಪಿಸಿದೆ.
ರಾಮದುರ್ಗ, ಸವದತ್ತಿ ತಾಲೂಕಿನ ಗ್ರಾಮದಲ್ಲಿ ಮನರೇಗಾ ಯೋಜನೆಯ ಕಾಲುವೆ ಹಾಗೂ ಹಳ್ಳ ಹೂಳೆತ್ತುವ ಕಾಮಗಾರಿಗಳು ರಾಜ್ಯದ ಗಮನ ಸೆಳೆದಿದೆ.
ಚುಂಚನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಚುಂಚನೂರ ಹಾಗೂ ಉಜ್ಜಿನಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಾಲುವೆ ಹೂಳೆತ್ತುವದರಲ್ಲಿ ತೊಡಗಿಕೊಂಡಿರುವ ಕೂಲಿಕಾರರೊಂದಿಗೆ ತಾಪಂ ಸಹಾಯಕ ನಿರ್ದೇಶಕ ಸಂಗನೌಡ ಹಂದ್ರಾಳ ಅವರು ಸಂವಾದ ನಡೆಸಿ ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು ಮತ್ತು ಕೂಲಿಕಾರರಿಗೆ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು. ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.