ಮೂರು ತಿಂಗಳಲ್ಲಿ 61.41ಲಕ್ಷ ‌ಮಾನವ ದಿನ ಸೃಜನೆ-ನರೇಗಾ ಅನುಷ್ಠಾನದಲ್ಲಿ ರಾಜ್ಯಕ್ಕೆ ಬೆಳಗಾವಿ ಜಿಪಂ ಪ್ರಥಮ

IMG-20230705-WA0015.jpg
Published on


ಬೆಳಗಾವಿ: ಮುಂಗಾರು ಮಳೆ ವಿಳಂಬದಿಂದ ಉದ್ಯೋಗ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರ,‌ ಕೂಲಿಕಾರರ ಕೈಹಿಡಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ.
ಗ್ರಾಮೀಣ ಭಾಗದಲ್ಲಿ ‌ನರೇಗಾ ಯೋಜನೆ ಅಡಿ‌ ಕೂಲಿ ಕೆಲಸಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕೇವಲ ಮೂರು ತಿಂಗಳಲ್ಲಿ 61.41 ಲಕ್ಷದಷ್ಟು ಮಾನವ ದಿನ ಸೃಜನೆಯಾಗಿರುವುದೇ ಇದಕ್ಕೆ ಸಾಕ್ಷಿ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಗೆ 2023-24ನೇ ಸಾಲಿಗೆ 1.40 ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ. ಅದರ ಪೈಕಿ ಎಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಜಿಪಂ  61.41,ರಷ್ಟು ಮಾನದ ದಿನ ಸೃಜನೆ‌ಮೂಲಕ ನಿರೀಕ್ಷೆಗೂ ಮೀರಿಸಾಧನೆ ಮಾಡಿದೆ. ಅಲ್ಲದೆ ಜುಲೈ ೧ ರಂದು ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿರುವುದು ರಾಜ್ಯದಲ್ಲಿಯೇ ಇಲ್ಲಿಯವರೆಗೆ ಗರಿಷ್ಠ ಸಾಧನೆಯಾಗಿದೆ. ಒಟ್ಟಿನಲ್ಲಿ ನರೇಗಾ ಯೋಜನೆ ಅಡಿ‌ ಮಾನವ ದಿನ ಸೃಜನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ‌ಪಡೆದುಕೊಂಡಿದೆ ಎಂದು ಜಿಪಂ ಸಿಇಒ ಹರ್ಷಲ್ ಭೋಯರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net