ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ

Published on

ಮಾನ್ವಿ: ತಾಲೂಕಿನ ಆರೋಲಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ಸ್ವ ಸಹಾಯ ಸಂಘದ ಕಟ್ಟಡ ಕಾಮಗಾರಿಯನ್ನು ತಾಪಂ ಇಒ ಎಂ.ಡಿ.ಸೈಯ್ಯದ್ ಪಟೇಲ್ ಮಂಗಳವಾರ ಪರಿಶೀಲಿಸಿದರು. ಬಳಿಕ ನಾಲಾ ಹೂಳು ಎತ್ತುವ ಕಾಮಗಾರಿ ವೀಕ್ಷಣೆ ಮಾಡಿದರು.

ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿ

ಮಹಿಳಾ ಸ್ವ ಸಹಾಯ ಸಂಘದ ಕಟ್ಟಡ ಕಾಮಗಾರಿಗೆ ಉತ್ತಮ ಗುಣಮಟ್ಟದ ಸಾಮಾಗ್ರಿ ಬಳಸಬೇಕು. ನಿಗದಿತ ಸಮಯದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ತಾಪಂ ಇಒ ಎಂ.ಡಿ.ಸೈಯ್ಯದ್ ಪಟೇಲ್ ಅಧಿಕಾರಿಗೆ ಸೂಚಿಸಿದರು.
ಕಾಮಗಾರಿಯಲ್ಲಿ ಹಾಜರಿರುವ ಕೂಲಿ ಕಾರ್ಮಿಕರ ಮಾತ್ರ ಹಾಜರಿ ಹಾಕಬೇಕು. ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿ ಹಾಕಬೇಕು ಎಂದು ತಿಳಿಸದರು.

ಪಿಡಿಒ ಪಿಡಿಒ ರಘನಾಥ, ಸಹಾಯಕ ನಿರ್ದೇಶಕ ಅಲಂಬಾಷಾ, ಸಹಾಯಕ ನಿರ್ದೇಶಕ ಹನುಮಂತ, ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net