ನರೇಗಾದಲ್ಲಿ 36.92 ಲಕ್ಷ ಮಾನವ ದಿನ ಸೃಜನೆ ; ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾಹಿತಿ

OLYMPUS DIGITAL CAMERA
OLYMPUS DIGITAL CAMERA
Published on

ತುಮಕೂರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯ 330 ಗ್ರಾಪಂ ವ್ಯಾಪ್ತಿಯಲ್ಲಿ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆಗಸ್ಟ್ ಅಂತ್ಯಕ್ಕೆ 36.92 ಲಕ್ಷ ಮಾನವ ದಿನ ಸೃಜನೆ ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಗುರಿಯಲ್ಲಿ ಈಗಾಗಲೇ ಶೇ.59.56 ಪ್ರಗತಿ ಸಾಧಿಸಿದ್ದು, ಮಧುಗಿರಿ ತಾಲೂಕು 8.18 ಲಕ್ಷ ವಾನವ ದಿನ ಸೃಜಿಸುವ ಮೂಲಕ ಮೊದಲನೇ ಸ್ಥಾನದಲ್ಲಿದೆ. ತುಮಕೂರು ತಾಲೂಕು 0.82 ಲಕ್ಷ ವಾನವ ದಿನ ಸೃಜಿಸುವ ಮೂಲಕ ಕೊನೆಯ ಸ್ಥಾನದಲ್ಲಿದೆ. ಸಕಾಲದಲ್ಲಿ ಕೂಲಿ ಪಾವತಿಸುವಲ್ಲಿ ತುಮಕೂರು ಜಿಲ್ಲೆಯು ಶೇ.99.72ರಷ್ಟು ಮುಂಚೂಣಿಯಲ್ಲಿದೆ.

ಶಾಶ್ವತ ಬಾಳಿಕೆ ಬರುವಂತಹ ಉತ್ತಮ ಗುಣಮಟ್ಟದ ಆಸ್ತಿಗಳನ್ನು ಸೃಜನೆ ವಾಡುವಲ್ಲಿ ಪಿಡಿಒಗಳು ಹೆಚ್ಚಿನ ಶ್ರಮ ವಹಿಸಬೇಕು, ಅಲ್ಲದೆ ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಆದ್ಯತೆಯ ಮೇರೆಗೆ ಅಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಪಂ ಸೂಚಿಸಿದೆ.

ಗ್ರಾಪಂ ವ್ಯಾಪ್ತಿ ರೈತ ಬಂಧು ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ ಅಭಿಯಾನ ಪರಿಣಾಮಕಾರಿಯಾಗಿ ನಡೆಸುವಂತೆ ಜಿಲ್ಲೆಯ ಎಲ್ಲಾ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಅಕುಶಲ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಸಲುವಾಗಿ ವೈಯಕ್ತಿಕ ಕಾಮಗಾರಿಗಳಾದ ಎರೆಹುಳು ಟಕ ನಿರ್ಮಾಣ ಹಾಗೂ ಪೌಷ್ಟಿಕ ಕೈತೋಟ ನಿರ್ವಾಣ ಕಾಮಗಾರಿ ಹೆಚ್ಚು ಹೆಚ್ಚು ಕೈಗೆತ್ತಿಕೊಳ್ಳುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ರೈತ ಬಂಧು ಅಭಿಯಾನದಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 25 ಎರೆಹುಳು ಗೊಬ್ಬರದ ತೊಟ್ಟಿಗಳ ನಿರ್ವಾಣಕ್ಕೆ ಅವಕಾಶವಿದ್ದು, ಎಲ್ಲ ಗ್ರಾಪಂ ಕನಿಷ್ಠ 25ರಂತೆ ಎರೆಹುಳು ಟಕ ಕಾಮಗಾರಿ ಕೈಗೊಂಡಿದ್ದೇ ಆದಲ್ಲಿ, ಜಿಲ್ಲೆಯಲ್ಲಿ 8250 ಎರೆಹುಳು ಗೊಬ್ಬರ ತೊಟ್ಟಿಗಳು ನಿರ್ವಾಣವಾಗಲಿದೆ. ಅದೇ ರೀತಿ, ಪೌಷ್ಠಿಕ ಕೈತೋಟ ಅಭಿಯಾನದಡಿ ಪ್ರತೀ ಗ್ರಾಪಂಗೆ ಕನಿಷ್ಟ 10 ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿದರೂ ಜಿಲ್ಲೆಯಲ್ಲಿ 3300 ಪೌಷ್ಟಿಕ ಕೈತೋಟ ನಿರ್ಮಾಣವಾಗಲಿವೆ. ಡಾ.ಕೆ.ವಿದ್ಯಾಕುಮಾರಿ, ಸಿಇಒ, ತುಮಕೂರು ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net