ರಾಜಸ್ಥಾನ ಮೂಲದ ಆರೋಪಿಯಿಂದ ಮಾದಕ ವಸ್ತು, ಅಫೀಮು ವಶ

crime
Published on

ರಾಜಸ್ಥಾನ ಮೂಲದ ಆರೋಪಿಯನ್ನು ಬಂಧಿಸಿರುವ ಸಿಇಎನ್ ಕ್ರೈಂ ಠಾಣೆಯ ಪೊಲೀಸರು, 2 ಲಕ್ಷ ರೂ. ಮೌಲದ್ಯ ಎಂಡಿಎಂಎ ಮಾದಕ ವಸ್ತು ಮತ್ತು ಅಫೀಮು ವಶಪಡೆಸಿಕೊಂಡಿದ್ದಾರೆ.

ನಗರದ ನಜರ್‌ಬಾದ್ ಠಾಣಾ ವ್ಯಾಪ್ತಿಯ ಸರ್ಕಾರಿ ಅತಿಥಿ ಗೃಹಕ್ಕೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಗಸ್ತಿನಲ್ಲಿದ್ದ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ಹಾಗೂ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ವಾಹನ ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದ ರಾಜಸ್ಥಾನದ ಮೂಲದ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ವಿಚಾರಣೆಗೆ ಒಳಪಡಿಸಲಾಯಿತು.

ಈ ವೇಳೆ ಆರೋಪಿಯಿಂದ 1 ಗ್ರಾಂ 28 ಮಿಲಿ ಎಂಡಿಎಂಎ ಮಾದಕ ವಸ್ತು ಮತ್ತು 85 ಗ್ರಾಂ 28 ಮಿಲಿ ಅಫೀಮು ವಶಪಡಿಸಿಕೊಳ್ಳಲಾಗಿದೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net