ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ 1.28 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶ

IMG-20220626-WA0014
Published on

ಮಂಗಳೂರು: ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಡಿ ವಶಪಡಿಸಿಕೊಳ್ಳಲಾಗಿದ್ದ 1,28,74,700 ರೂ. ಮೌಲ್ಯದ ಮಾದಕ ವಸ್ತುಗಳನ್ನು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಭಾನುವಾರ ನಾಶಪಡಿಸಲಾಯಿತು.
ಕಮಿಷನರೇಟ್‌ ವ್ಯಾಪ್ತಿಯ 15 ಠಾಣೆಗಳಲ್ಲಿ 580.860 ಕೆ.ಜಿ. ಗಾಂಜಾ (1,16,17,200 ರೂ ಮೌಲ್ಯ), 25 ಗ್ರಾಂ ಹೆರಾಯಿನ್‌ (1,37,500 ರೂ.) ಮತ್ತು 320 ಗ್ರಾಂ ಎಂಡಿಎಂ (11,20,000 ರೂ. ಮೌಲ್ಯ)ನ್ನು ಪೊಲೀಸರು ವಿವಿಧ ಪ್ರಕರಣಗಳಡಿ ವಶ ಪಡಿಸಿಕೊಂಡಿದ್ದರು. ನ್ಯಾಯಾಲಯ ಆದೇಶದಂತೆ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಉಪಸ್ಥಿತಿಯಲ್ಲಿ ಭಾನುವಾರ ಅವೆಲ್ಲವನ್ನು ಮೂಲ್ಕಿಯ ರಾಮ್ಕಿ ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ ಲಿ. ಸಂಸ್ಥೆಯಲ್ಲಿ ನಾಶ ಪಡಿಸುವ ಪ್ರಕ್ರಿಯೆ ನಡೆಯಿತು. ಉನ್ನತ ಪೊಲೀಸ್‌ ಅಧಿಕಾರಿಗಳು, ವಿವಿಧ ಠಾಣಾಧಿಕಾರಿಗಳು, ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net