ನಾರಾಯಣಪುರ ಡ್ಯಾಂನ ಆರು ಕ್ರಸ್ಟ್‌ಗೇಟ್‌ಗಳು ಕ್ಲೋಸ್

Krisha rever
ನಾರಾಯಣಪುರ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದರಿಂದ ದೇವದುರ್ಗ ತಾಲೂಕು ಹೂವಿನಹೆಡಗಿಯಲ್ಲಿ ಕೃಷ್ಣನದಿ ತುಂಬಿ ಹರಿಯುತ್ತಿರುವುದು.
Published on

ದೇವದುರ್ಗ: ನಾರಾಯಣಪುರ ಜಲಾಶಯದಲ್ಲಿ ಒಳಹರಿವು ತಗ್ಗಿದ್ದರಿಂದ ಡ್ಯಾಂನಿಂದ ಕೃಷ್ಣಾ ನದಿಗೆ ಹರಿಸುತ್ತಿದ್ದ ನೀರಿನ ಪ್ರಮಾಣ ತಗ್ಗಿದೆ. ಜಲಾಶಯದಿಂದ ಭಾನುವಾರ ಸಂಜೆ ಆರು ಕ್ರಸ್ಟ್ ಕೇಟ್‌ಗಳ ಮೂಲಕ 22,230ಕ್ಯೂಸೆಕ್ ನೀರು ಕೃಷ್ಣಾನದಿಗೆ ಹರಿಬಿಡಲಾಗಿದೆ.

ಜಲಾಶಯದಲ್ಲಿ ಶನಿವಾರ ಒಳಹರಿವು 46ಸಾವಿರ ಕ್ಯೂಸೆಕ್ ಇದ್ದಕಾರಣ ಡ್ಯಾಂನಿಂದ 12ಕ್ರಸ್ಟ್ ಗೇಟ್‌ಗಳ ಮೂಲಕ 52ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಶನಿವಾರ ರಾತ್ರಿ ಒಳಹರಿವು 35ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದ್ದರಿಂದ ಹೊರಹರಿವು ಕೂಡ ಕಡಿಮೆ ಮಾಡಲಾಗಿದೆ. ಭಾನುವಾರ ಸಂಜೆ ವೇಳೆಗೆ ಡ್ಯಾಂನಲ್ಲಿ ಒಳಹರಿವು 20ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದ್ದರಿಂದ ಆರು ಕ್ರಸ್ಟ್‌ಗೇಟ್‌ಗಳನ್ನು ಕ್ಲೋಸ್ ಮಾಡಲಾಗಿದೆ. ಸದ್ಯ 6ಕ್ರಸ್ಟ್‌ಗೇಟ್‌ಗಳ ಮೂಲಕ 22ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.

ಶನಿವಾರ 52ಸಾವಿರ ಕ್ಯೂಸೆಕ್ ನೀರು ಹರಿಸಿದ್ದರಿಂದ ಸಂಜೆವೇಳೆಗೆ ತಾಲೂಕಿನ ಹೂವಿನಹೆಡಗಿಯ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದ ಪೂಜಾ ಕೈಂಕರ್ಯಗಳನ್ನು ಸ್ಥಗಿತ ಮಾಡಲಾಗಿತ್ತು. ಸದ್ಯ ನದಿಯಲ್ಲಿ ನೀರಿನ ಪ್ರಮಾಣ ಇಲಾಖೆಯಾಗಿದ್ದು ಸೋಮವಾರ ದೇವಸ್ಥಾನ ಜಲದಿಗ್ಬಂಧನದಿಂದ ಮುಕ್ತವಾಗಲಿದ್ದು ಪೂಜೆ ಕಾರ್ಯ ಮುಂದುವರಿಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net