ನಾರಾಯಣಸ್ವಾಮಿ ಅವರನ್ನು ವಿಪ ಸ್ಥಾನದಿಂದ ವಜಾಗೊಳಿಸಿ

Narayanaswamy should be removed from his position of vipa.
ಚಲವಾದಿ ನಾರಾಯಣಸ್ವಾಮಿ ಅವರನ್ನು ವಿ.ಪ. ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಮೇಶ ಆಸಂಗಿ, ಅಶೋಕ ಚಲವಾದಿ, ಪ್ರಕಾಶ ಗುಡಿಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ಚಲವಾದಿ ನಾರಾಯಣಸ್ವಾಮಿ ಅವರನ್ನು ವಿ.ಪ. ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಮಿತಿ ರಾಜ್ಯ ಸಂಚಾಲಕ ರಮೇಶ ಆಸಂಗಿ ಮಾತನಾಡಿ, ಸಚಿವ ಮತ್ತು ಶೋಷಿತ ವರ್ಗದ ಧ್ವನಿಯಾದ ಪ್ರಿಯಾಂಕ್​ ರ್ಖಗೆ ಅವರಿಗೆ ವಿ.ಪ. ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಬಳಸಿದ ಪದವು ತಮ್ಮ ನಾಯಕ ಸ್ಥಾನಕ್ಕೆ ಅಪಕೀರ್ತಿ ತರುವಂತಾಗಿದೆ. ನಾರಾಯಾಣಸ್ವಾಮಿ ಅವರು, ಸಚಿವ ಪ್ರಿಯಾಂಕ ರ್ಖಗೆ ಅವರಿಗೆ ನಾಯಿ ಎಂಬ ಪದ ಬಳಸುವ ಮೂಲಕ ಇಡೀ ಶೋಷಿತ ಸಮಾಜಕ್ಕೆ ಅಪಮಾನವೆಸಗಿದ್ದಾರೆ. ರಾಜ್ಯಪಾಲರು ಕೂಡಲೇ ನಾರಾಯಣಸ್ವಾಮಿ ಅವರನ್ನು ವಿ.ಪ. ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಕರ್ನಾಟಕ ದಲಿತ ಸಮಿತಿ ಅಶೋಕ ಚಲವಾದಿ ಮಾತನಾಡಿದರು. ಪ್ರಕಾಶ ಗುಡಿಮನಿ, ವಿನಯ ಗುಣಸಾಗರ, ಶರಣು ಸಿಂಧೆ, ಸಾಯಿನಾಥ ಬನಸೋಡೆ, ಪೀರಪ್ಪ ಕಟ್ಟಿಮನಿ, ಶೇಖರ ಕಾಣಿ, ರಾಜು ಸಿಂದಗೇರಿ, ಶಿವು ಗುಡಮಿ, ಲಕ್ಷ$್ಮಣ ಏಳಗಿ, ಮುತ್ತು ಸುಲ್ಪಿ, ಸಾಗರ ಹೊಸಮನಿ, ಸುನೀಲ ಸಿಂಧೆ, ಪ್ರಕಾಶ ಕ್ಯಾತಗಿರಿ, ಅರುಣ ಗುಡಿಸಲಮನಿ, ರಾವೇಂದ್ರ ಪಡಗಾನೂರ, ರಮೇಶ ಬನಸೋಡೆ, ಯಮನಪ್ಪ ಬೂತಾಳಿ, ಬೀರು ಹಳ್ಳಿ, ಮಹೇಶ ಗುಡಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net