ಲೇಡಿಹಿಲ್‌ ಬಳಿ ನಾರಾಯಣ ಗುರು ವೃತ್ತ ನಾಮಫಲಕ ಅಳವಡಿಸಿದ ಬಿರುವೆರ್ ಕುಡ್ಲ ಸಂಘಟನೆ

IMG-20220128-WA0005
Published on

ಮಂಗಳೂರು: ನಗರದ ಲೇಡಿಹಿಲ್ ಬಳಿಯ ವೃತ್ತಕ್ಕೆ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡಬೇಕು ಎನ್ನುವ ಕೂಗು ಮತ್ತೆ ಜೋರಾಗಿದೆ. ಇದೀಗ ಬಿರುವೆರ್ ಕುಡ್ಲ ಸಂಘಟನೆಯಿಂದ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ನಾಮಫಲಕ ಅಳವಡಿಸಲಾಗಿದೆ. ವೃತ್ತದ ಎಂಟು ದಿಕ್ಕುಗಳಲ್ಲಿ ಒಟ್ಟು ಎಂಟು ನಾಮಫಲಕ ಅಳವಡಿಸಲಾಗಿದೆ. ನಾರಾಯಣಗುರು ಚಿತ್ರ ಇರುವ ಫಲಕದಲ್ಲಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು- ಬ್ರಹ್ಮಶ್ರೀ ನಾರಾಯಣಗುರು ವೃತ್ತ - ಬಿರುವೆರ್‌ ಕುಡ್ಲ ಎಂದು ಬರೆಯಲಾಗಿದೆ. ಬುಧವಾರ ಆಯೋಜಿಸಲಾದ ಸ್ವಾಭಿಮಾನದ ನಡಿಗೆ ಹಿನ್ನೆಲೆಯಲ್ಲಿ ವೃತ್ತಕ್ಕೆ ಹಾಕಲಾಗಿರುವ ಹಳದಿ ಬಣ್ಣದ ಶೃಂಗಾರ ಇನ್ನೂ ಹಾಗೇ ಇದೆ. ಈ ನಡುವೆ ಜ.26ರಂದು ಭಜರಂಗದಳ ಮಂಗಳೂರು ಶಾಖೆಯವರೂ ವೃತ್ತದ ಮಧ್ಯಭಾಗದಲ್ಲಿ ನಾರಾಯಣ ಗುರು ವೃತ್ತ ಎಂದು ನಾಮಫಲಕ ಅಳವಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net