ನಾರಾಯಣ ಜಾತೀಯತೆ ವಿರುದ್ಧ ಹೋರಾಡಿದ ಸಂತ

ವಿರಾಜಪೇಟೆಯಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
ವಿರಾಜಪೇಟೆಯಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
Published on

ವಿರಾಜಪೇಟೆ: ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯಿಂದ ಮಂಗಳವಾರ ಆಚರಿಸಲಾಯಿತು.

ನಗರದ ಗೌರಿಕೆರೆ ರಸ್ತೆಯಲ್ಲಿರುವ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾರಾಯಣಗುರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಖೆ ಅಧ್ಯಕ್ಷ ಟಿ.ಎ.ನಾರಾಯಣ, ಶೋಷಿತ ವರ್ಗಗಳಿಗೆ ನಾರಾಯಣ ಗುರು ದೇವರಿಗೆ ಸಮಾನರು. ಅಲ್ಲದೆ ಜಾತೀಯತೆಯನ್ನು ಹೋಗಲಾಡಿಸುವುದರಲ್ಲಿ ಬೃಹತ್ ಹೋರಾಟ ಮಾಡಿ ದೇಗುಲ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟ ಧೀಮಂತ ಸಂತ ಎಂದು ನಾವು ಭಾವಿಸಬೇಕು ಎಂದರು.

ಜನಾಂಗ ಮತ್ತು ಸಮುದಾಯ ಅಭಿವೃದ್ಧಿ ಹೊಂದಲು ಸರ್ವರೂ ಶಿಕ್ಷಣ ಪಡೆಯಬೇಕು ಎಂಬ ಅಂಶದೊಂದಿಗೆ ಹೋರಾಟ ಮಾಡಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಖೆ ಉಪಾಧ್ಯಕ್ಷ ಟಿ.ಆರ್.ಗಣೇಶ್, ಕಾರ್ಯದರ್ಶಿ ಟಿ.ಕೆ.ಪದ್ಮನಾಭ, ನಿರ್ದೇಶಕರಾದ, ಕೆ.ಬಿ.ಹರೀಶ್, ಕೆ.ಕೆ. ಅನಿಲ್, ಟಿ.ಡಿ.ಹರೀಶ್, ಕೆ.ಎನ್.ಉಪೇಂದ್ರ, ಭಾಸ್ಕರ್, ಪ್ರಭಾ, ಜನಾರ್ದನ, ಸುಬ್ರಮಣಿ, ಕೆ.ಸಿ.ಶಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net