ಗಮನ ಸೆಳೆದ ನಾರಾಯಣ ಗುರುಗಳ ರಂಗೋಲಿ

kota (3)
Published on

ಕೋಟ: ಸಾಸ್ತಾನ ಶ್ರೀ ಬ್ರಹ್ಮಬೈದರ್ಕಳ ಶ್ರೀ ಬಿಲ್ಲವ ಸೇವಾ ಸಂ ವತಿಯಿಂದ ಸಾಸ್ತಾದ ಗೋಳಿಗರಡಿ ದೈವಸ್ಥಾನದಲ್ಲಿ ನಾರಾಯಣ ಗುರುಗಳ ಜಯಂತೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂದ ಅಧ್ಯಕ್ಷ ಎಂ.ಸಿ ಚಂದ್ರಶೇಖರ ಪೂಜಾರಿ ಸಾರಥ್ಯದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮವನ್ನು ಗರಡಿ ಅರ್ಚಕರಾದ ದಿನಕರ ಪೂಜಾರಿ, ಶ್ರೀನಿವಾಸ ಪೂಜಾರಿ ನೆರವೇರಿಸಿದರು.

ಯುವ ಕಲಾವಿದೆ ಪ್ರಜ್ಞಾ ಜಿ.ಹಂದಟ್ಟು ಬಿಡಿಸಿದ ನಾರಾಯಣ ಗುರುಗಳ ರಂಗೋಲಿ ಗಮನ ಸೆಳೆಯಿತು. ಚಿತ್ರ ಕಲಾವಿದೆ ಪ್ರಜ್ಞಾ ಅವರನ್ನು ತಾಯಿ ಗೀತಾ ಪೂಜಾರಿ ಸಮ್ಮುಖದಲ್ಲಿ ಗೌರವಿಸಲಾಯಿತು.

ಸಂ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಕೋಶಾಧಿಕಾರಿ ವಿಜಯ ಪೂಜಾರಿ, ಗರಡಿ ಆಡಳಿತ ಮುಖ್ಯಸ್ಥ ಜಿ.ವಿಠ್ಠಲ್ ಪೂಜಾರಿ, ದೈವಸ್ಥಾನದ ಪಾತ್ರಿ ಶಂಕರ ಪೂಜಾರಿ, ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂ ಮಹಿಳಾ ಟಕ ಅಧ್ಯಕ್ಷ ಲಿಲಾವತಿ ಗಂಗಾಧರ್, ವಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುವಾರ್, ಪ್ರಮುಖರಾದ ಗಣೇಶ್ ಪೂಜಾರಿ, ಕರಿಯ ಪೂಜಾರಿ, ವನಜಾ, ಸುಧಾಕರ ಪೂಜಾರಿ ಐರೋಡಿ, ಸುರೇಶ್ ಸಂಬೋಡ್ಲು, ಕುಸುಮಾ, ಮನೋಜ್ ಕುವಾರ್, ಅರ್ಚಕ ಹರೀಶ್, ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ, ಉಷಾ ಗಣೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net