ನಾರಾಯಣಗುರು ಸಮಾಧಿ ದಿನಾಚರಣೆ

New Project
Published on

ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಂ ಕಾಸರಗೋಡು ಯೂನಿಯನ್ ಸೆಂಟರ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮಾಧಿ ದಿನ ಯೂನಿಯನ್ ಕಚೇರಿಯಲ್ಲಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಗುರುಪೂಜೆ ಮತ್ತು ಪುಷ್ಪ ಸಮರ್ಪಣೆ ನಡೆಯಿತು. ಎಸ್‌ಎನ್‌ಡಿಪಿ ಸಭಾ ನಿರ್ದೇಶಕ ಪಿ.ಕೆ.ವಿಜಯನ್ ಸಮಾರಂಭ ಉದ್ಘಾಟಿಸಿದರು. ಒಕ್ಕೂಟ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ ಮುಖ್ಯ ಭಾಷಣ ಮಾಡಿದರು. ಒಕ್ಕೂಟ ಪಂಚಾಯಿತಿ ಸಮಿತಿ ಸದಸ್ಯರಾದ ಮೋಹನನ್ ಮೀಪುಗುರಿ, ರಾಜೇಶ್ ಕಾರಡ್ಕ, ನಾಗೇಶ್ ಕುಂಬಳೆ, ವಿಜಯನ್ ಮನ್ನಿಪ್ಪಾಡಿ, ಕಷ್ಣನ್ ಕೂಡ್ಲು, ನಾರಾಯಣ ಪುಂಡೂರು, ಕೇಶವ ಮಾಡ, ಕಷ್ಣನ್ ಪಾರಕಟ್ಟ, ಜಯಂತ ಪಚ್ಚಂಬಳ, ಮೋಹಿನಿ ಹರೀಶ್ ಮತ್ತು ಸುನೀತಾ ದಾಮೋದರನ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net