ನಾರಾಯಣಗುರು ಜಯಂತಿ ಸಂಭ್ರಮ

bnk6
Published on

ಬಣಕಲ್: ಬ್ರಹ್ಮ ಶ್ರೀ ನಾರಾಯಣ ಗುರು ಮಲಯಾಳಿ ಸಂಘದ ಆಶ್ರಯದಲ್ಲಿ ಬಣಕಲ್ ಮತ್ತು ಹಿರೇಬೈಲ್ ನಾರಾಯಣ ಗುರು ಮಲಯಾಳಿ ಸಂಘದ ಸಂಯುಕ್ತವಾಗಿ ನಾರಾಯಣಗುರು ಜಯಂತಿ ಹಾಗೂ ಓಣಂ ಹಬ್ಬವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ನಾರಾಯಣಗುರುಗಳ ಸಂದೇಶ ಸಮಾಜಕ್ಕೆ ದಾರಿ ದೀಪ. ಇಂತಹ ಹಬ್ಬಗಳು ಸಹಕಾರ ಮತ್ತು ಸೌಹಾರ್ದವನ್ನು ಬಲಪಡಿಸುತ್ತವೆ ಎಂದು ಹೇಳಿದರು.

ಕ್ರಾರ್ಯಕ್ರಮದಲ್ಲಿ ಸಾಧಕರಿಗೆ, 10ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳು, ಗಣಿತ ಶಿಕ್ಷಕ ಶಿವರಾಮ ಗೌಡ, ಸಾವಿತ್ರಿಬಾಯಿ ಪ್ರಶಸ್ತಿ ವಿಜೇತೆ ಅಶ್ವಿನಿ, ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ ಅಧ್ಯಕ್ಷ ಪಿ.ಆರ್.ಸುಧಾಕರ್ ಬಿಳಗುಳ, ಮಹಿಳಾ ಅಧ್ಯಕ್ಷೆ ಸುಮಿತ್ರಾ ವೇಲಾಯದನ್ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಜಗನ್ಮೋಹನ್, ಪ್ರಧಾನ ಕಾರ್ಯದರ್ಶಿ ಆರ್.ಕೃಷ್ಣ ಬಿಳಗುಳ, ಉಪ ಕಾರ್ಯದರ್ಶಿ ಮೋಹನ್ ಕುನ್ನಳ್ಳಿ, ಖಜಾಂಚಿ ಉಣ್ಣಿಕೃಷ್ಣ, ಸಂಘಟನಾ ಕಾರ್ಯದರ್ಶಿ ಓಮನ್ ಸುಬ್ರಹ್ಮಣ್ಯ, ಗೌರವಾಧ್ಯಕ್ಷ ಮೋಹರ್ನ ಗಂಗನಮಕ್ಕಿ ಹಾಗೂ ಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ವೇಲಾಯದ, ಪರಿಕ್ಷಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net