

ಬೆಳಗಾವಿ : ಸಮಾಜದಲ್ಲಿನ ಜಾತಿ, ಬೇದ ಭಾವ ತೆರವುಗೊಳಿಸಿ, ಜನ ಸಾಮಾನ್ಯರ ಬದುಕಿನಲ್ಲಿ ಅಡಗಿರುವಂತಹ ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಉತ್ತಮ ಜೀವನ ಕಟ್ಟಿಕೊಟ್ಟ ಕೀರ್ತಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸಲ್ಲುತ್ತದೆ ಎಂದು ಲಿಂಗರಾಜ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ರೇಣುಕಾ ಕಠಾರಿ ಹೇಳಿದರು.
ಜಿಲ್ಲಾಡಳತ, ಜಿಲ್ಲಾ ಪಂಚಾಯತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರ ನಾಡು ಎಂದು ಕರೆಸಿಕೊಂಡ ಕೇರಳ ರಾಜ್ಯದಲ್ಲಿ ಜಾತಿ ಜಾತಿಗಳೆಂದು ದ್ವೇಷ, ಅಸೂಹೆ, ಕ್ರೌರ್ಯ, ದೌರ್ಜನ್ಯ ತಾಂಡವಾಡುತ್ತಿರುವಂತಹ ಸಂದರ್ಭದಲ್ಲಿ ಜಾತಿಯ ಅಂದಕಾರವನ್ನು ಕಟ್ಟಿ ಹಾಕಿ ಸಮಾನತೆಯನ್ನು ತಂದವರು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ವಿದ್ಯಾವತಿ ಭಜಂತ್ರಿ, ಬಲ್ಲವ ಸಂಘದ ಕಾರ್ಯದರ್ಶಿ ಯಾದ ಸುಜನ್ ಕುಮಾರ, ಬಲ್ಲವ ಸಂಘದ ಉಪಾಧ್ಯಕ್ಷರಾದ ಸಂತೋಷ ಪೂಜಾರೆ, ಸುಂದರ್ ಎಸ್ ಕೋಟಿಯಾನ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.