

ಮಂಗಳೂರು : ಕೂಳೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಬಾಲಕೃಷ್ಣ ಅರಸಲಚ್ಚಿಲ್ ಚಾಲನೆ ನೀಡಿದರು. ಗಣಹೋಮ, ನಾಗತಂಬಿಲ, ರಕ್ತೇಶ್ವರಿ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ಹಿರಿಯರಾದ ಬೂಬ ಪೂಜಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಾಲಕೃಷ್ಣ ಅರಸಲಚ್ಚಿಲ್
ಭಾಗವಹಿಸಿದ್ದರು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಮಂದಿರದ ಅಧ್ಯಕ್ಷ
ಸುಕುಮಾರ್ ಕೆ. ಸುವರ್ಣ, ಉಪಾಧ್ಯಕ್ಷ ಪ್ರಕಾಶ್ ಬಂಗ್ರಕೂಳೂರು, ರೇಣುಕಾ ತಾರಾನಾಥ್, ಪವಿತ್ರ ಉಮೇಶ್ ಅಮೀನ್,
ಪ್ರಧಾನ ಕಾರ್ಯದರ್ಶಿ ಸದಾಶಿವ ಸುವರ್ಣ, ಸಂಘಟನಾ ಕಾರ್ಯದರ್ಶಿ ಹರೀಶ್ ಎಂ. ಅಮೀನ್, ಕಾರ್ಯದರ್ಶಿ ಜೀವನ್ ದೇವಾಡಿಗ, ಜತೆ ಕಾರ್ಯದರ್ಶಿ ಉಮೇಶ್ ಅಮೀನ್, ಯೋಗೀಶ್ ಕೂಳೂರು, ಕೃತಿಕ ಅಮೀನ್, ಪ್ರವೀಣ್ ಕುಮಾರ್, ಪೂಜಾ ವ್ಯವಸ್ಥಾಪಕ ಅಂಕಿತ್ ಪೂಜಾರಿ, ಮಂದಿರದ ಮಾಜಿ ಅಧ್ಯಕ್ಷ ಜಯಾನಂದ ಅಮೀನ್, ಪ್ರಧಾನ ಆರ್ಚಕ ಚರಣ್ ಕುಮಾರ್, ಪವನ್ ದೇವಾಡಿಗ ಉಪಸ್ಥಿತರಿದ್ದರು. ಕೋಶಾಧಿಕಾರಿ ಪವಿತ್ರ ಅಂಚನ್ ಸ್ವಾಗತಿಸಿದರು. ಚೈತಾಲಿ, ನವೀನ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಹರೀಶ್ ಎಂ. ಅಮೀನ್ ಕಾರ್ಯಕ್ರಮ ನಿರೂಪಿಸಿದರು.