ಗುತ್ತಿಗೆ ಪದ್ಧತಿ ಕೆಲಸಕ್ಕೆ ನಾರಾಯಣ್ ನೇರ ಹೊಣೆ

Protest
Published on

ಮೈಸೂರು: ಬಹುತೇಕ ಪೌರಕಾರ್ಮಿಕರು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡಲು ಮಾಜಿ ಮೇಯರ್ ನಾರಾಯಣ್ ಅವರೇ ನೇರ ಹೊಣೆಯಾಗಿದ್ದಾರೆ ಎಂದು ನಗರಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಪೌರಕಾರ್ಮಿಕ ಮಹಿಳೆಯರು ದೂರಿದ್ದಾರೆ.


ಅವರು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ರಾಜಕೀಯ ಬೆಳವಣಿಗೆಗಾಗಿ ಪೌರಕಾರ್ಮಿಕರನ್ನು ಬಳಸಿಕೊಂಡರು. ಎಲ್ಲರನ್ನೂ ಕಾಯಂಗೊಳಿಸುತ್ತೇನೆ ಎಂದು ಆಸೆ ತೋರಿಸಿ ರಾಜಕೀಯ ಸಮಾವೇಶಗಳಿಗೆ ಬಳಸಿಕೊಂಡು ನಂತರ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಇದೀಗ ಮತ್ತೆ ಎಂಎಲ್‌ಸಿ ಹುದ್ದೆಗಾಗಿ ಅದೇ ಮಾತುಗಳನ್ನಾಡುತ್ತಿದ್ದಾರೆ ಎಂದು ಮಹದೇವಮ್ಮ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದಾಗ ಐಪಿಡಿ ಸಾಲಪ್ಪ ವರದಿಯ ಪ್ರಕಾರ 500 ಜನರಿಗೆ ಒಬ್ಬ ಪೌರಕಾರ್ಮಿಕ ಎಂದು ಆದೇಶ ಮಾಡಿದ್ದರೆ ಎಲ್ಲ ಪೌರಕಾರ್ಮಿಕರು ಕಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರ ಉಡಾಫೆಯಿಂದ ಇಂದಿಗೂ ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಪೌರಕಾರ್ಮಿಕ ಮಹಿಳೆಯರಾದ ದೇವಮ್ಮ, ಕಮಲಮ್ಮ, ಗೀತಾ, ಗಂಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net